×
Ad

ಮರಳು ಸತ್ಯಾಗ್ರಹ ಸಮಿತಿ ರಚನೆ

Update: 2019-01-24 18:40 IST

ಮಂಗಳೂರು, ಜ. 24: ಜನಸಾಮಾನ್ಯರಿಗೆ ಮರಳು ಸಿಗದ ಮತ್ತು ಬಡಜನರು ಮನೆ ನಿರ್ಮಿಸಲು ಸಾಧ್ಯವಾಗದಂತಹ ದುಸ್ಥಿತಿಯ ಬಗ್ಗೆ ಹಾಗೂ ಸಮಸ್ಯೆಯ ಪರಿಹಾರಕ್ಕೆ ಹೋರಾಟ ನಡೆಸಲು ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿ ತೀರದ ತಲಾ 10 ಗ್ರಾಪಂಗಳ ಅಧ್ಯಕ್ಷರ ನೇತೃತ್ವದಲ್ಲಿ ಮಾನವ ಬಂಧುತ್ವ ವೇದಿಕೆಯ ವಿಲ್ಫ್ರಡ್ ಹಾಗೂ ಕಾರ್ಮಿಕ ಮುಖಂಡ ಬಿ.ಎಂ.ಭಟ್‌ರ ಮಾರ್ಗದರ್ಶನದಲ್ಲಿ ರೈತ ಸಂಘ ಹಸಿರು ಸೇನೆ, ದ.ಕ. ಜಿಲ್ಲಾ ಕಟ್ಟಡ ಕಾರ್ಮಿಕ ಸಂಘ, ಅಟೋ ಚಾಲಕರ ಸಂಘ, ಪಿಕ್‌ಅಪ್ ಚಾಲಕರ ಸಂಘ ಹಾಗೂ ಕೆಲವು ಸಮಾಜ ಸೇವಕರು, ಗ್ರಾಪಂ ಸದಸ್ಯರು ಇತ್ತೀಚೆಗೆ ಉಪ್ಪಿನಂಗಡಿ ಗ್ರಾಪಂನಲ್ಲಿ ಸಭೆ ಸೇರಿ ಜ.30ರಂದು ಉಪ್ಪಿನಂಗಡಿಯಲ್ಲಿ ಮರಳು ಸತ್ಯಾಗ್ರಹ ನಡೆಸಲು ತೀರ್ಮಾನಿಸಿದೆ. ಅಲ್ಲದೆ ಮರಳು ಸತ್ಯಾಗ್ರಹ ಸಮಿತಿ ರಚಿಸಲಾಯಿತು.

ಸಮಿತಿಯ ಅಧ್ಯಕ್ಷರಾಗಿ ವಿಲ್ಫ್ರೆಡ್ ಡಿಸೋಜ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ.ಭಟ್ ಆಯ್ಕೆಯಾಗಿದ್ದಾರೆ. ಸಮಿತಿಯ ಇತರ ಪದಾಧಿಕಾರಿಗಳಾಗಿ ಸುರೇಶ್ ಅತ್ರ, ರೂಪೇಶ್ ರೈ, ಅಶ್ರಫ್‌ಉಪ್ಪಿನಂಗಡಿ, ಜತೀಂದ್ರ ಶೆಟ್ಟಿ, ಚಂದ್ರಶೇಖರ ಮಡಿವಾಳ, ಇಬ್ರಾಹೀಂ ಯು.ಕೆ., ಸುನೀಲ್ ಕುಮಾರ್, ಸಮಿತಿ ಸದಸ್ಯರಾಗಿ ಗ್ರಾಪಂಗಳ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಉಪ್ಪಿನಂಗಡಿ, ಇಸುಬು ಇಳಂತಿಲ, ಜೆ.ವಿಕ್ರಮ ತಣ್ಣೀರುಪಂತ, ಸಂತೋಷ್ ಪದ್ಮಜೆ ಬಜತ್ತೂರು, ಶ್ಯಾಮರಾಜ್ ಪಟ್ರಮೆ, ಲೋಕೇಶ್ ಕುದ್ಯಾಡಿ, ಇಬ್ರಾಹೀಂ, ಅಬ್ದುಲ್ ರಹ್ಮಾನ್ ಯೂನಿಕ್, ಶರೀಫ್ ಪಟ್ರಮೆ, ಮಂಜುನಾಥ ಲಾಯಿಲ, ಅಬ್ದುಲ್ ಲತೀಫ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News