ಜ್ಯುವೆಲ್ ಅಪ್ರೈಸಿಂಗ್ ತರಬೇತಿ ಶಿಬಿರ
Update: 2019-01-24 18:56 IST
ಮಂಗಳೂರು, ಜ.24: ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಗೋಲ್ಡ್‌ಸ್ಮಿತ್ ಅಕಾಡಮಿ ಮಧುರೈ ಸಂಸ್ಥೆಯು ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಸಹಯೋಗದೊಂದಿಗೆ ಇತ್ತೀಚೆಗೆ ಜ್ಯುವೆಲ್ ಅಪ್ರೈಸಿಂಗ್ ತರಬೇತಿ ಶಿಬಿರ ನಡೆಸಿತು.
ನಗರದ ರಥಬೀದಿಯ ಶ್ರೀಕಾಳಿಕಾಂಬಾ ನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಸಭಾಂಗಣದಲ್ಲಿ ಜರುಗಿದ ಶಿಬಿರವನ್ನು ದ.ಕ.ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಎ.ಮೋಹನ್ ಕುಮಾರ್ ಬೆಳ್ಳೂರು ಉದ್ಘಾಟಿಸಿದರು. ಗೋಲ್ಡ್ ಸ್ಮಿತ್ ಅಕಾಡಮಿಯ ಸದಸ್ಯ ಉಮೇಶ್ ಅಚಾರ್ಯ ಪುತ್ತೂರು, ಮಣಿವಾಸಗನ್ ಮಧುರೈ ಸಂಘದ ಕಾರ್ಯದರ್ಶಿ ಪ್ರಕಾಶ್ ಹಲೇಜಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಕೆ.ಎಲ್. ಹರೀಶ್ ಸ್ವಾಗತಿಸಿದರು. ರಮೇಶ್ ಉಪ್ಪಿನಂಗಡಿ ವಂದಿಸಿದರು.