ಬಂದ್ ಮುಗಿದ ಬಳಿಕ ‘ಸ್ಟೇಟ್ ಆಫ್ ದ ಯೂನಿಯನ್’ ಭಾಷಣ: ಟ್ರಂಪ್

Update: 2019-01-24 14:43 GMT

ವಾಶಿಂಗ್ಟನ್, ಜ. 24: ಸರಕಾರ ಬಂದ್ ಕೊನೆಗೊಂಡ ಬಳಿಕ ನಾನು ‘ಸ್ಟೇಟ್ ಆಫ್ ದ ಯೂನಿಯನ್’ ಭಾಷಣ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ.

ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿ ಅಧ್ಯಕ್ಷರು ಮಾಡುವ ವಾರ್ಷಿಕ ಭಾಷಣಕ್ಕೆ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತಡೆ ವಿಧಿಸಿದ ಬಳಿಕ ಅಧ್ಯಕ್ಷರು ಈ ಘೋಷಣೆ ಮಾಡಿದ್ದಾರೆ.

‘‘ಸರಕಾರದ ಬಂದ್ ಚಾಲ್ತಿಯಲ್ಲಿರುವುದರಿಂದ, ಸ್ಟೇಟ್ ಆಫ್ ದ ಯೂನಿಯನ್ ಭಾಷಣ ಮಾಡುವಂತೆ ನ್ಯಾನ್ಸಿ ಪೆಲೋಸಿ ನನಗೆ ಹೇಳಿದ್ದರು. ನಾನು ಒಪ್ಪಿಕೊಂಡಿದ್ದೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

‘‘ಬಳಿಕ, ಸರಕಾರದ ಸ್ಥಾಗಿತ್ಯದ ಕಾರಣಕ್ಕಾಗಿ ಅವರು ಮನಸ್ಸು ಬದಲಾಯಿಸಿದರು ಹಾಗೂ ಭಾಷಣವನ್ನು ಮುಂದೂಡುವಂತೆ ಸೂಚಿಸಿದರು. ಇದು ಅವರ ಹಕ್ಕು. ಸರಕಾರ ಬಂದ್ ಮುಗಿದ ಬಳಿಕ ನಾನು ಭಾಷಣ ಮಾಡುತ್ತೇನೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News