ಮಂಗಳೂರು: ‘ಬಿಗ್ ನ್ಯೂ ವ್ಯಾಗನ್ ಆರ್’ ಮಾರುಕಟ್ಟೆಗೆ ಬಿಡುಗಡೆ
ಮಂಗಳೂರು, ಜ.24: ಮಾರುತಿ ಸುಝುಕಿ ಇಂಡಿಯಾದ ವ್ಯಾಗನ್ ಆರ್‌ನ 3ನೇ ಜನರೇಶನ್‌ನ ‘ಬಿಗ್ ನ್ಯೂ ವ್ಯಾಗನ್ ಆರ್’ನ್ನು ನಗರದ ಹಂಪನಕಟ್ಟೆಯಲ್ಲಿನ ಮಾಂಡೋವಿ ಮೋಟಾರ್ಸ್‌ನ ಮಳಿಗೆಯಲ್ಲಿ ಗುರುವಾರ ಮಾರುಕಟ್ಟೆಗೆ ಲೋಕಾರ್ಪಣೆಗೊಳಿಸಲಾಯಿತು.
ಮಾಂಡೋವಿ ಮೋಟಾರ್ಸ್ ಸಿಎಂಡಿ ಅರೂರ್ ಕಿಶೋರ್ ರಾವ್ ‘ಬಿಗ್ ನ್ಯೂ ವ್ಯಾಗನ್ ಆರ್’ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಗ್ರಾಹಕರ ತೃಪ್ತಿಯೇ ಮಾಂಡೋವಿ ಮೋಟಾರ್ಸ್‌ನ ಸಂಪತ್ತಾಗಿದೆ. ಗ್ರಾಹಕರು ಪ್ರೋತ್ಸಾಹ, ಸಲಹೆ ನೀಡುತ್ತಾ ಬಂದಿದ್ದು, ಇದು ಮುಂದಿನ ದಿನಗಳಲ್ಲೂ ಮುಂದುವರಿಯಬೇಕು. ಸಂಸ್ಥೆಯು ಸೇವಾ ಮನೋಭಾವ ಹೊಂದಿದೆ ಎಂದು ತಿಳಿಸಿದರು.
ವ್ಯಾಗನ್ ಆರ್‌ನ ಹಲವು ವರ್ಷಗಳ ಗ್ರಾಹಕರಾದ ಮಹೇಶ್ ಕಾಮತ್, ಅನಂತ್, ಫಾ.ಮೈಕಲ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಂಡೋವಿ ಮೋಟಾರ್ಸ್‌ನ ಚೀಫ್ ಅಕೌಂಟೆಂಟ್ ಬಿ.ಪಿ.ಭಟ್, ಎಂಎಸ್‌ಐಎಲ್ ಏರಿಯಾ ಮ್ಯಾನೇಜರ್ ದೀಪಕ್ ಶರ್ಮಾ, ಮಾಂಡೋವಿ ಮೋಟಾರ್ಸ್‌ನ ಸಿಜಿಎಂ ನೆರೆಂಕಿ ಪಾರ್ಶ್ವನಾಥ, ಎಜಿಎಂ ಶಶಿಧರ್ ಟಿ., ಸೇಲ್ಸ್ ಮ್ಯಾನೇಜರ್ ಕಿಶನ್ ಕೆ. ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚೈತ್ರಾ ಪ್ರಾರ್ಥಿಸಿದರು. ಮಾಂಡೋವಿ ಮೋಟಾರ್ಸ್‌ನ ಎಚ್‌ಆರ್ ಮ್ಯಾನೇಜರ್ ರಾಜೇಶ್ ಭಟ್, ಕಾರ್ಯಕ್ರಮವನ್ನು ಆರ್‌ಜೆ ಕಿರಣ್ ನಿರೂಪಿಸಿದರು. ಸೌಮ್ಯಾ ರಾವ್ ವಂದಿಸಿದರು.
ಬಿಗ್ ನ್ಯೂ ವ್ಯಾಗನ್ ಆರ್ ವಿಶೇಷತೆ
‘ಬಿಗ್ ನ್ಯೂ ವ್ಯಾಗನ್ ಆರ್’ ಕಾರು ದೊಡ್ಡ ಸೈಝ್ ಹೊಂದಿದ್ದು, ಹೆಚ್ಚು ಸ್ಥಳಾವಕಾಶ ಕಲ್ಪಿಸಲಾಗಿದೆ. ಉತ್ಕೃಷ್ಠ ಮಟ್ಟದ 1.0 ಇಂಜಿನ್‌ನ್ನು ಹೊಂದಿದ್ದು, 1.2 ಎಲ್ ಇಂಜಿನ್ ಸ್ಟ್ರಾಂಗರ್ ಹಾರ್ಟ್‌ನ್ನು ಅಳವಡಿಸಲಾಗಿದ್ದು, ಡ್ರೈವರ್ ಏರ್ ಬ್ಯಾಗ್‌ನಲ್ಲಿ ಹೆಚ್ಚು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.