ಮಂಗಳೂರು: ಸಂವಿಧಾನ ವಿರೋಧಿ ಬ್ಯಾನರ್ ಅಳವಡಿಕೆ ವಿರುದ್ಧ ದೂರು
Update: 2019-01-24 21:13 IST
ಮಂಗಳೂರು, ಜ. 24: ಹಿಂದೂ ಜನಜಾಗೃತಿ ಸಮಿತಿಯ ಹೆಸರಲ್ಲಿ ಜ. 27ರಂದು ಮಂಗಳೂರಿನಲ್ಲಿ ಹಿಂದೂ ರಾಷ್ಟ್ರದ ಜಾಗೃತಿ ವಿಚಾರಕ್ಕೆ ಸಂಬಂಧಿಸಿದಂತೆ ‘ಹಿಂದುಗಳೇ ಎಲ್ಲರೂ ಒಟ್ಟಾಗಿ ರಾಷ್ಟ್ರದ ಸ್ಥಾಪನೆ ಮಾಡೋಣ’ ಜಾತ್ಯತೀತ ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಮಾಡುವ ಬಗ್ಗೆ ಸಂವಿಧಾನ ವಿರುದ್ಧವಾದ ಕಾರ್ಯಕ್ರಮ ನಡೆಸುತ್ತಿರುವುದರ ವಿರುದ್ಧ ದೂರು ದಾಖಲಿಸಲಾಗಿದೆ.
‘ಮಂಗಳೂರಿನಲ್ಲಿ ಸಂವಿಧಾನ ವಿರೋಧಿ ಕಾರ್ಯಕ್ರಮದ ಬ್ಯಾನರ್‌ಗಳು ವ್ಯಾಪಕವಾಗಿ ಹಾಕಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತು ಕೋಮು ಭಾವನೆಯನ್ನು ಪ್ರಚೋದಿಸುತ್ತಿರುವುದು ಕಂಡು ಬರುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಕಾರ್ಯಕ್ರಮದ ಸಂಘಟಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಶಾದಾಬ್ ಅಬ್ದುಲ್ ರಹ್ಮಾನ್ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.