ಪಿಎನ್‌ ಬಿಯ ಸಾಲ ಮರುಪಾವತಿ ವ್ಯಾಜ್ಯ ತಿರಸ್ಕರಿಸಿದ ಬ್ರಿಟನ್ ನ್ಯಾಯಾಲಯ

Update: 2019-01-24 16:17 GMT

ಲಂಡನ್, ಜ. 24: ಸಾಲ ಪಡೆದು ಮರುಪಾವತಿಸದೆ ವಂಚಿಸಿದ ಒಂಬತ್ತು ಮಂದಿಯ ವಿರುದ್ಧ ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್‌ಬಿ) ಹೂಡಿರುವ ಮೊಕದ್ದಮೆಯನ್ನು ಬ್ರಿಟನ್‌ನ ನ್ಯಾಯಾಲಯವೊಂದು ಗುರುವಾರ ತಿರಸ್ಕರಿಸಿದೆ.

ಅಮೆರಿಕದಲ್ಲಿ ತೈಲ ಸಂಸ್ಕರಣೆ ಮತ್ತು ವಿದ್ಯುತ್ ಉತ್ಪಾದನೆ ಯೋಜನೆಗಳಿಗಾಗಿ ಬ್ಯಾಂಕ್ 45 ಮಿಲಿಯ ಡಾಲರ್ (ಸುಮಾರು 320 ಕೋಟಿ ರೂಪಾಯಿ) ಮೊತ್ತದ ಸಾಲ ನೀಡಿತ್ತು.

ಭಾರತ ಮತ್ತು ಅಮೆರಿಕಗಳಲ್ಲಿರುವ 7 ವ್ಯಕ್ತಿಗಳು ಮತ್ತು ಎರಡು ಕಂಪೆನಿಗಳ ವಿರುದ್ಧ ಬ್ಯಾಂಕ್ ಮೊಕದ್ದಮೆ ದಾಖಲಿಸಿತ್ತು.

ಹಣವನ್ನು ಬ್ಯಾಂಕ್‌ನಿಂದ ಎಗರಿಸಲಾಗಿದೆ ಹಾಗೂ ಖಾತರಿ ನೀಡಲಾಗಿರುವಂತೆ, ಪಾವತಿಸಬೇಕಾಗಿರುವ ಹಣವನ್ನು ಪಾವತಿ ಮಾಡಲಾಗಿಲ್ಲ ಎಂದು ಬ್ಯಾಂಕ್ ಆರೋಪಿಸಿದೆ.

ಆದರೆ, ವಂಚನೆ ಪ್ರಕರಣದಲ್ಲಿ ಮಂಡಿಸಬೇಕಾದ ಪ್ರಮುಖ ಅಂಶಗಳೇ ಇಲ್ಲಿ ನಾಪತ್ತೆಯಾಗಿವೆ ಎಂದು ಹೇಳಿರುವ ಹೈಕೋರ್ಟ್‌ನ ಚೀಫ್ ಮಾಸ್ಟರ್ ಮಾರ್ಶ್, ಮೊಕದ್ದಮೆಯನ್ನು ತಳ್ಳಿಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News