×
Ad

ಭಟಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ “ಬ್ಯಾಂಕೊ ಬ್ಲ್ಯೂ ರಿಬ್ಬನ್ 2018’’ ಪ್ರಶಸ್ತಿ

Update: 2019-01-24 22:48 IST

ಭಟ್ಕಳ, ಜ. 24: ಎವೀಸ್ ಪಬ್ಲಿಕೇಶನ್, ಕೊಲ್ಹಾಪುರ ಹಾಗೂ ಗ್ಯಾಲೆಕ್ಸಿ ಇನಮಾ, ಪುಣೆ ಇವರ ಸಹಯೋಗದಲ್ಲಿ  ಮುಂಬೈಯಲ್ಲಿ ನಡೆದ “ಎಡ್ವಂಟೇಜ್- 2019” ವಾರ್ಷಿಕ ಸಮ್ಮೇಳನ ಮತ್ತು “ಬ್ಯಾಂಕೋ ಬ್ಲ್ಯೂ ರಿಬ್ಬನ್ ಸೆರೆಮನಿ” ಮೂರು ದಿವಸಗಳ ಕಾರ್ಯಕ್ರಮದಲ್ಲಿ ರಾಜ್ಯದ ಪ್ರತಿಷ್ಟಿತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಟಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕು “ಬ್ಯಾಂಕೊ ಬ್ಲ್ಯೂ ರಿಬ್ಬನ್ 2018’’ ಪ್ರಶಸ್ತಿಗೆ ಭಾಜನವಾಗಿದೆ. 

ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಟಕ ಮಹೀಂದ್ರ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಸುಧಾಕರ ಇವರಿಂದ ಪ್ರಶಸ್ತಿ ಸ್ವೀಕರಿಸಿದರು. 

ವಿವಿಧ ರಾಜ್ಯದಿಂದ ಭಾಗವಹಿಸಿದ ಸರಿ ಸುಮಾರು 500 ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ All India Urban Banks Category with a Deposit between 375 to 500 crores’’  ಈ ವಿಭಾಗದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಭಟಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಜಯಗಳಿಸಿದೆ. 

ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಅತ್ಯುನ್ನತ ಬ್ಯಾಂಕಿಂಗ್ ಸೇವೆಯನ್ನು ನೀಡುವುದರ ಮೂಲಕ ಪ್ರಚಲಿತವಾದ ಭಟಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಕಳೆದ ಬಾರಿಯೂ All India Urban Bank with Mix Business between 501 to 750 crores category“ ಯಲ್ಲಿ “ಬ್ಯಾಂಕೊ ಪುರಸ್ಕಾರ್-2017” ಪ್ರಶಸ್ತಿಯನ್ನು ಪಡೆದಿರುವುದು ಸ್ಮರಣೀಯ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News