×
Ad

ಕೇಮಾರು: ಜಲ್ಲಿಮಿಕ್ಸಿಂಗ್ ಲಾರಿ ಪಲ್ಟಿ; ಮೂವರಿಗೆ ಗಾಯ

Update: 2019-01-24 23:29 IST

ಮೂಡುಬಿದಿರೆ, ಜ. 24: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಮಾರು ಬಾಂದೊಟ್ಟು ಎಂಬಲ್ಲಿ ಜಲ್ಲಿ ಕ್ರಶರ್ ಲಾರಿ ಪಲ್ಟಿಯಾಗಿ ಚಾಲಕ ಹಾಗೂ ಇಬ್ಬರು ಕಾರ್ಮಿಕರು ಲಾರಿಯಡಿ ಸಿಲುಕಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಕೇಮಾರು ಬಾಂದೊಟ್ಟು ಕಿರು ಸೇತುವೆ ಕಾಮಗಾರಿಗಾಗಿ ಬರುವಾಗ ಇಳಿಜಾರಿನ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಗೆ ಲಾರಿ ಬಿದ್ದಿದೆ. ಎದುರು ಭಾಗ ಬಹುತೇಕ ಜಖಂಗೊಂಡಿದ್ದು, ಲಾರಿಯಡಿ ಸಿಲುಕಿದ ಚಾಲಕ ಗದಗ ಮೂಲದ ಹನುಮಂತ, ಕಾರ್ಮಿಕರಾದ ಜಾರ್ಖಂಡ್‍ನ ಜವಹಾರಲಾಲ್ ಹಾಗೂ ಸೈಫುದ್ದೀನ್ ಅವರನ್ನು ರಕ್ಷಿಸಲಾಗಿದೆ. ಸೈಫುದ್ದೀನ್ ಸ್ಥಿತಿ ಗಂಭೀರವಾಗಿದ್ದು, ಉಳಿದಿಬ್ಬರು  ಕೂಡ ತೀವ್ರ ರೀತಿಯಲ್ಲಿ ಗಾಯಗೊಂಡಿದ್ದಾರೆ. ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಸಹಿತ ಸ್ಥಳೀಯ ಯುವಕರು, ಮೂಡುಬಿದಿರೆ ಅಗ್ನಿಶಾಮಕದಳದ ಸಿಬ್ಬಂದಿಗಳು, ಪೊಲೀಸರು ಗಾಯಾಳುಗಳ ಕಾರ್ಯಾ ಚರಣೆಯಲ್ಲಿ ತೊಡಗಿ ಲಾರಿಯಡಿ ಸಿಲುಕಿದವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡುಬಿದಿರೆ ಇನ್ಸ್ ಪೆಕ್ಟರ್ ರಾಮಚಂದ್ರ ನಾಯಕ್ ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News