×
Ad

ಅಂಗರಗುಂಡಿ: ಕ್ವಿಝ್ ನಲ್ಲಿ ಪ್ರಥಮ ಸ್ಥಾನ ಪಡೆದ ಮಹಮ್ಮದ್ ಹಿಷಾಮ್ ರಾಜ್ಯ ಮಟ್ಟಕ್ಕೆ ಆಯ್ಕೆ

Update: 2019-01-25 20:22 IST

ಮಂಗಳೂರು, ಜ. 25: ಮಿಶ್ಬಾಹುಲ್ ಹುಲೂಮ್ ಮದರಸ ಅಂಗರಗುಂಡಿ ಬೈಕಂಪಾಡಿ ಇದರ 7ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಹಿಷಾಮ್ ಜಿಲ್ಲಾ ಮಟ್ಟದಿಂದ ಜೂನಿಯರ್ ಕ್ವಿಝ್ ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹಿಷಾಮ್ ರೇಂಜ್ ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು ಇದೀಗ ಉತ್ತಮ ಅಂಕದೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಸನ್ಮಾನ

ಇದೇ ಸಂಧರ್ಭದಲ್ಲಿ ಮಹಮ್ಮದ್ ಹಿಷಾಮ್ ನನ್ನು ಮೊಹಿಯುದ್ದೀನ್ ಜುಮ್ಮಾ ಮಸ್ಜಿದ್, ಮಿಶ್ಬಾಹುಲ್ ಹುಲೂಮ್ ಮದರಸ ಕಮಿಟಿ ಮತ್ತು ಸುನ್ನಿ ಬಾಲ ಸಂಘ ಜಂಟಿ ಆಶ್ರಯದಲ್ಲಿ ಸನ್ಮಾನಿಸಲಾಯಿತು.

ಜುಮ್ಮಾ ಮಸೀದಿ ಉಪಾಧ್ಯಕ್ಷರಾದ ಮಹಮ್ಮದ್ ಚೈಬಾವು ಮತ್ತು ಮಸೀದಿಯ ಖತೀಬ್ ಹೈದರಾಲಿ ಸಖಾಫಿ ಫಲಕ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮದರಸದ ಮುಖ್ಯ ಶಿಕ್ಷಕ ಝಯಿನುದ್ದೀನ್ ಸಖಾಫಿ, ಬದ್ರಿಯಾ ಮಸೀದಿ ಉಸ್ತಾದ್ ಯಾಹ್ಯಾ ಸಖಾಫಿ , ಮಸೀದಿ ಆಡಳಿತ ಮಂಡಳಿಯ ಸಮೀರ್, ಯಹ್ಯಾ, ಇಲ್ಯಾಸ್, ಚೈಯ್ಯ, ಹಿರಿಯರಾದ  ಬಿ.ಕೆ.ಇಬ್ರಾಹಿಂ, ರಹೀಮಾಕ, ಇಬ್ರಾಹಿಂ ಅಕ್ಕರೆ ಉಪಸ್ಥಿತರಿದ್ದರು.

ಮಹಮ್ಮದ್ ಹಿಷಾಮ್ ಅಂಗರಗುಂಡಿಯ ಇಸಾಕ್ ಮತ್ತು ನೂರುಜಹಾನ್ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News