×
Ad

ಕಾಪುವಿನಲ್ಲಿ ತುಳು ಮಿನದನ -2019 ಕಾರ್ಯಕ್ರಮ

Update: 2019-01-25 20:30 IST

ಕಾಪು, ಜ. 25: ತುಳುವರಲ್ಲಿ ನಮ್ಮ ಭಾಷೆ, ಮಣ್ಣು, ಪರಂಪರೆಯ ಬಗೆಗೆ ಪವಿತ್ರವಾದ ಭಾವನೆ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಉಡುಪಿ ತುಳುಕೂಟದ ಅಧ್ಯಕ್ಷ ವಿ. ಜಿ. ಶೆಟ್ಟಿ ಉಡುಪಿ ತುಳು ಕೂಟದ ಅಧ್ಯಕ್ಷ ವಿ. ಜಿ. ಶೆಟ್ಟಿ ಹೇಳಿದರು.

ತುಳುಕೂಟ ಉಡುಪಿ ಮತ್ತು ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ಶುಕ್ರವಾರ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾಲೇಜು ವಿದ್ಯಾಥಿಗಳ ಪ್ರತಿಭಾ ಪ್ರದರ್ಶನ ತುಳು ಮಿನದನ -2019 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಕಾರಾತ್ಮಕವಾಗಿ ತುಳುನಾಡಿನ ಆಚಾರ ವಿಚಾರ, ಸಂಪ್ರದಾಯಗಳ ನಿರಂತರ ಪಾಲನೆಯಿಂದ ಮಾತ್ರ ತುಳು ಭಾಷೆ ಉಳಿಯುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಕೆ. ವಾಸುದೇವ ಶೆಟ್ಟಿ ಮಾತನಾಡಿ, ತುಳುನಾಡಿನ ದೇವಸ್ಥಾನಗಳು, ದೈವಸ್ಥಾನಗಳು, ಇನ್ನಿತರ ಧಾರ್ಮಿಕ ಶ್ರದ್ಧಾಕೇಂದ್ರಗಳು ಜೀರ್ಣೋದ್ಧಾರಗೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿದಾಗ ತುಳುಭಾಷೆ, ಸಂಸ್ಕøತಿ ಪರಂಪರೆ ಬೆಳೆಯುತ್ತದೆ. ತುಳು ಸಂಸ್ಕøತಿ ಮತ್ತು ಸಂಪ್ರಧಾಯಗಳನ್ನು ಉಳಿಸುವಲ್ಲಿ ತುಳುಕೂಟದ ಕಾರ್ಯಕ್ರಮಗಳು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದು ಹೇಳಿದರು. 

ಉದ್ಯಮಿ ಮನೋಹರ್ ಶೆಟ್ಟಿ, ತುಳುನಾಡು ರಾಷ್ಠ್ರೀಯ, ಅಂತಾರಾಷ್ಠ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಸಮೃದ್ದವಾಗಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಚಲನಚಿತ್ರ, ಕೃಷಿ, ಅಲ್ಲದೆ ನಾಗಾರಾಧನೆ, ದೈವಾರಾಧನೆ ಜನಪದೀಯ ಪರಂಪರೆಯಿಂದ ತುಳು ಸಂಸ್ಕೃತಿ ಶ್ರೀಮಂತವಾಗಿದೆ ಎಂದರು.

ಉದ್ಯಮಿಗಳಾದ ಸರ್ವೋತ್ತಮ ಕುಂದರ್ ಪೊಲಿಪು, ಲಕ್ಷ್ಮೀಶ ತಂತ್ರಿ ಕಲ್ಯ, ಕಾಪು ಪುರಸಭಾ ಸದಸ್ಯ ಅನಿಲ್ ಕುಮಾರ್, ಕಾರ್ಯಕ್ರಮ ಸಂಚಾಲಕ ಲಕ್ಷ್ಮೀಕಾಂತ್ ಕೆ., ಎನ್ನೆಸ್ಸೆಸ್ ಅಧಿಕಾರಿ ವಿದ್ಯಾ ಡಿ. ಉಪಸ್ಥಿತರಿದ್ದರು.

ತುಳುಕೂಟದ ಗೌರವಾಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವನೆಗೈದರು. ಕಾರ್ಯಕ್ರಮದ ಸಂಚಾಲಕ ವಿ.ಕೆ. ಯಾದವ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ಶಿಕ್ಷಕ ದಯಾನಂದ ಡಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News