ಅಖಿಲೇಶ್ ಮುಂದಿನ ಪ್ರಧಾನಿ: ಲಕ್ನೋದಲ್ಲಿ ಕಾಣಿಸಿಕೊಂಡ ಪೋಸ್ಟರ್‌ಗಳು

Update: 2019-01-25 16:01 GMT

ಲಕ್ನೋ, ಜ. 25: ಮುಂಬರುವ ಲೋಕಸಭಾ ಚುನಾವಣೆಗೆ ಎಸ್‌ಪಿ-ಬಿಎಸ್‌ಪಿ ಮೈತ್ರಿ ಘೋಷಿಸಿದ ದಿನದ ಬಳಿಕ ದೇಶದ ಮುಂದಿ ಪ್ರಧಾನಿ ಅಖಿಲೇಶ್ ಯಾದವ್ ಎಂದು ಬಿಂಬಿಸುವ ಹೋರ್ಡಿಂಗ್‌ಗಳು ಉತ್ತರಪ್ರದೇಶದ ಲಕ್ನೋದಲ್ಲಿ ಕಾಣಿಸಿಕೊಂಡಿವೆ. ಎಸ್‌ಪಿಯ ರಾಜ್ಯ ಕೇಂದ್ರ ಕಚೇರಿ ಸಮೀಪ ಹಾಗೂ ಅಖಿಲೇಶ್ ಯಾದವ್ ಅವರ ನಿರ್ಮಾಣ ಹಂತದಲ್ಲಿರುವ ನಿವಾಸದ ಎದುರು ಸೇರಿದಂತೆ ಲಕ್ನೋದ ವಿವಿಧೆಡೆ ಪೋಸ್ಟರ್‌ಗಳು ಕಂಡು ಬಂದಿವೆ.

 ‘‘ನಮಗೆ ಅಖಿಲೇಶ್ ಅವರಲ್ಲಿ ನಂಬಿಕೆ ಇದೆ. ದೇಶಕ್ಕೆ ಹೊಸ ಪ್ರಧಾನಿಯ ಅವಶ್ಯಕತೆ ಇದೆ’’ ಎಂಬ ಅರ್ಥ ನೀಡುವ ಹಿಂದಿ ಘೋಷಾ ವಾಕ್ಯದೊಂದಿಗೆ ಅಖಿಲೇಶ್ ಯಾದವ್ ಅವರ ದೊಡ್ಡ ಚಿತ್ರವನ್ನು ಪೋಸ್ಟರ್ ಒಳಗೊಂಡಿದೆ. ಪೋಸ್ಟರ್‌ನ ಮೇಲಿನ ಬದಿಯಲ್ಲಿ ಎಸ್‌ಪಿ ಮಾಜಿ ವರಿಷ್ಠ ಹಾಗೂ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸಣ್ಣ ಚಿತ್ರ ಇದೆ. ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರ ಜನ್ಮ ದಿನಾಚರಣೆ ಜನವರಿ 15ರಂದು ನಡೆದಿದ್ದು, ಅಂದು ಕೂಡ ಮಾಯಾವತಿ ಅವರನ್ನು ಪ್ರಧಾನಿ ಎಂದು ಬಿಂಬಿಸುವ ಕೆಲವು ಪೋಸ್ಟರ್‌ಗಳನ್ನು ಬಿಎಸ್‌ಪಿ ಕಾರ್ಯಕರ್ತರು ಅಂಟಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ 38 ಸ್ಥಾನಗಳಲ್ಲಿ ಜಂಟಿಯಾಗಿ ಸ್ಪರ್ಧಿಸಲು ಎಸ್‌ಪಿ ಹಾಗೂ ಬಿಎಸ್‌ಪಿ ಈ ತಿಂಗಳ ಆರಂಭದಲ್ಲಿ ಮೈತ್ರಿ ಮಾಡಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News