ಲೈಂಗಿಕ ದೌರ್ಜನ್ಯದ ಸಂತ್ರಸ್ತರ ಗುರುತು ಬಹಿರಂಗಕ್ಕೆ ಗೃಹ ಸಚಿವಾಲಯ ನಿಷೇಧ

Update: 2019-01-25 16:03 GMT

ಹೊಸದಿಲ್ಲಿ, ಜ. 25: ಮಾಧ್ಯಮಗಳು ಲೈಂಗಿಕ ದೌರ್ಜನ್ಯದ ಸಂತ್ರಸ್ತರ ಹೆಸರನ್ನು ಬಹಿರಂಗಪಡಿಸುವುದನ್ನು ಗೃಹ ಸಚಿವಾಲಯ ನಿಷೇಧಿಸಿದೆ ಹಾಗೂ ಅದು ನ್ಯಾಯಾಲಯದ ಅನುಮತಿಯೊಂದಿಗೆ ನಿರ್ದಿಷ್ಟ ಪ್ರಕರಣಗಳನ್ನು ಮಾತ್ರ ಬಹಿರಂಗಗೊಳಿಸಬಹುದು ಎಂದಿದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ 8 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಮಾದ್ಯಮಗಳು ಸಂತ್ರಸ್ತೆಯ ಹೆಸರು ಹಾಗೂ ಭಾವಚಿತ್ರ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಈ ನಿರ್ದೇಶನ ನೀಡಿದೆ. ಪೋಕ್ಸೊ ಅಡಿಯಲ್ಲಿ ಅಪ್ರಾಪ್ತ ಸಂತ್ರಸ್ತರ ಹೆಸರು ಬಹಿರಂಗಪಡಿಸುವುದಾದರೆ, ಅದು ಅಪ್ರಾಪ್ತರ ಪರವಾಗಿ ಇದ್ದರೆ, ಅದಕ್ಕೆ ವಿಶೇಷ ನ್ಯಾಯಾಲಯ ಅನುಮತಿ ಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಸಂತ್ರಸ್ತ ಅಪ್ರಾಪ್ತರ ಹೆಸರು ಅಥವಾ ಗುರುತನ್ನು ಯಾರೊಬ್ಬರೂ ಮುದ್ರಣ, ಇಲೆಕ್ಟ್ರಾನಿಕ್ಸ್ ಅಥವಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಬಾರದು ಎಂದು ಆದೇಶ ಹೇಳಿದೆ ಎಂದು ನ್ಯೂಸ್‌ಲಾಂಡ್ರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News