ಬಾಬಾ ರಾಮ್‌ದೇವ್ ವಿರುದ್ಧದ ವೀಡಿಯೊ ಲಿಂಕ್ ತೆಗೆಯುವಂತೆ ಫೇಸ್‌ಬುಕ್, ಗೂಗಲ್, ಟ್ವಿಟರ್‌ಗೆ ಹೈಕೋರ್ಟ್ ನಿರ್ದೇಶ

Update: 2019-01-25 16:05 GMT

ಹೊಸದಿಲ್ಲಿ, ಜ. 25: ಯೋಗ ಗುರು ರಾಮ್‌ದೇವ್ ವಿರುದ್ಧದ ಆರೋಪ ಒಳಗೊಂಡಿರುವ ವೀಡಿಯೊ ಲಿಂಕ್ ಅನ್ನು ತೆಗೆಯುವುದು, ರದ್ದುಪಡಿಸುವುದು ಅಥವಾ ದುರ್ಬಲಗೊಳಿಸಲು ಫೇಸ್‌ಬುಕ್, ಗೂಗಲ್ ಹಾಗೂ ಅವುಗಳ ಸಹ ಸಂಸ್ಥೆಗಳಾದ ಯೂಟ್ಯೂಬ್ ಹಾಗೂ ಟ್ವಿಟ್ಟರ್‌ಗೆ ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ಮಧ್ಯಂತರ ಆದೇಶ ಜಾರಿ ಮಾಡಿದೆ. 

ವೀಡಿಯೊ ಅಪ್‌ಲೋಡ್ ಮಾಡಿದ ವ್ಯಕ್ತಿಗಳಿಗೆ ಸಂಬಂಧಿಸಿದ ಚಂದಾದಾರರ ಮಾಹಿತಿ ನೀಡುವಂತೆ ಸಾಮಾಜಿಕ ಜಾಲತಾಣದ ವೇದಿಕೆಗಳಿಗೆ ನ್ಯಾಯಾಲಯ ಸೂಚಿಸಿದೆ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಉಚ್ಚ ನ್ಯಾಯಾಲಯ ಅಳಿಸಲು ಆದೇಶ ನೀಡಿದ ರಾಮ್‌ದೇವ್ ಕುರಿತ ಪುಸ್ತಕದ ಆಯ್ದ ಭಾಗವನ್ನು ಈ ವೀಡಿಯೊ ಒಳಗೊಂಡಿದೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಹೇಳಿದ್ದಾರೆ. ಆಕ್ಷೇಪಾರ್ಹ ಭಾಗಗಳನ್ನು ಅಲಿಸುವವರೆಗೆ ‘ಗಾಡ್‌ಮ್ಯಾನ್ ಫ್ರಂಮ್ ಟೈಕೂನ್’ ಪುಸ್ತಕ ಪ್ರಕಟಿಸದಂತೆ ಲೇಖಕರು ಹಾಗೂ ಪ್ರಕಾಶಕರಿಗೆ 2018 ಸೆಪ್ಟಂಬರ್ 29ರಂದು ಉಚ್ಚ ನ್ಯಾಯಾಲಯ ತಡೆ ನೀಡಿತ್ತು ಎಂದು ನ್ಯಾಯಮೂರ್ತಿ ಹೇಳಿದರು. ಪುಸ್ತಕದ ಈ ಅಳಿಸದ ಭಾಗದ ವೀಡಿಯೊವನ್ನು ಫೇಸ್‌ಬುಕ್ ಗೂಗಲ್, ಯೂಟ್ಯೂಬ್ ಹಾಗೂ ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿ ಬಹಿರಂಗಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News