×
Ad

ಚಲನಚಿತ್ರ ನಟ ರಮೇಶ್ ಭಟ್‌ಗೆ ಬಿಂದುಶ್ರೀ ಪ್ರಶಸ್ತಿ ಪ್ರದಾನ

Update: 2019-01-25 21:40 IST

ಬೈಂದೂರು, ಜ.25: ಗೀಳಿದ್ದವನಿಗೆ ಗೋಳಿಲ್ಲ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲಿಯೇ ಮುಂದುವರಿಯಲು ಪೋಷಕರು ಅವಕಾಶ ಮಾಡಿಕೊಡಬೇಕು. ಗೀಳು ಎಲ್ಲರನ್ನು ಸೆಳೆಯೊಲ್ಲ. ಅದರೆಡೆಗೆ ಸಾಗಿದವರು ಮುಂದೊಂದು ದಿನ ದೊಡ್ಡ ವ್ಯಕ್ತಿಗಳೇ ಆಗುತ್ತಾರೆ ಎಂದು ಚಲನಚಿತ್ರ ನಟ ರಮೇಶ್ ಭಟ್ ಹೇಳಿದ್ದಾರೆ.

ಸುರಭಿ ಬೈಂದೂರು ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಗುರುವಾರ ಬೈಂದೂರು ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ಸುರಭಿ ಜೈಸಿರಿ ಕಾರ್ಯಕ್ರಮದಲ್ಲಿ ಬಿಂದುಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಸಿನೆಮಾ ರಂಗಕ್ಕೆ ಬಂದು 45 ವರ್ಷ ಕಳೆದಿದ್ದೇನೆ. ಹತ್ತಾರು ನಿರ್ದೇಶಕರು, ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇದೆಲ್ಲದರ ದೆಸೆಯಿಂದ ನಾಡಿನಾ ದ್ಯಂತ ಸಾಕಷ್ಟು ಪ್ರಶಸ್ತಿ ಸನ್ಮಾನಗಳು ಸಿಕ್ಕಿವೆ. ಆದರೆ ನನ್ನ ಹುಟ್ಟೂರಿನ ಈ ಪ್ರಶಸ್ತಿ ಜೀವಮಾನದ ಶ್ರೇಷ್ಠ ಪುರಸ್ಕಾರ ಆಗಿದೆ. ಬದುಕಿನ ಕೊನೆಯ ತನಕವೂ ನಟಿಸುತ್ತಲೇ ಇರಬೇಕು. ಕಲಿತದ್ದನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂಬುದೇ ನನ್ನ ಆಸೆ ಎಂದರು.

ಅಧ್ಯಕ್ಷತೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ವಹಿಸಿದ್ದರು. ಜಿಪಂ ಸದಸ್ಯ ಶಂಕರ ಪೂಜಾರಿ, ಬೈಂದೂರು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ವಸಂತ ಹೆಗ್ಡೆ, ಉದ್ಯಮಿ ಪ್ರಕಾಶ್ ಭಟ್, ಬೈಂದೂರು ಜೆಸಿಐ ಅಧ್ಯಕ್ಷ ಮಣಿಕಂಠ ಮುಖ್ಯ ಅತಿಥಿಗಳಾಗಿದ್ದರು. ಸುರಭಿ ಅಧ್ಯಕ್ಷ ಸತ್ಯನಾ ಕೊಡೇರಿ, ನಿರ್ದೇಶಕ ಗಣಪತಿ ಹೋಬಳಿದಾರ್, ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ ಕಬ್ಸೆ ಉಪಸ್ಥಿತರಿದ್ದರು.

ಈ ಸಂದರ್ಭ ಭರತನಾಟ್ಯ ಗುರು ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಹಾಗೂ ಚಂಡೆಗುರು ರಾಜರಾಮ್ ರಾವ್ ಕುಂದಾಪುರ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಭರತನಾಟ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸಲಾಯಿತು.

ಪ್ರಶಸ್ತಿ ಆಯ್ಕೆ ಸಮಿತಿಯ ಜನಾರ್ದನ ಎಸ್. ಮರವಂತೆ ಅಭಿನಂದನಾ ಭಾಷಣ ಮಾಡಿದರು. ಸುರಭಿ ಬೈಂದೂರು ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರಭಿ ಕಾರ್ಯಕಾರಿ ಸಮಿತಿ ಸದಸ್ಯ ರಾಘವೇಂದ್ರ ಕಾಲ್ತೋಡು ಸ್ವಾಗತಿಸಿದರು. ಕಾರ್ಯದರ್ಶಿ ರಾಮಕೃಷ್ಣ ಉಪ್ಪುಂದ ವಂದಿಸಿದರು. ಉಪಾಧ್ಯಕ್ಷ ಆನಂದ ಮದೆ್ದಿಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News