ಉಡುಪಿ: 89ರ ಹರೆಯದ ಸೂರು ಅಜ್ಜಿಗೆ ಸನ್ಮಾನ
Update: 2019-01-25 21:51 IST
ಉಡುಪಿ, ಜ.26: ಪುರಭವನದಲ್ಲಿ ಇಂದು ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಸಂದರ್ಭದಲ್ಲಿ ಅತೀ ಹೆಚ್ಚು ಬಾರಿ ಮತದಾನ ಮಾಡಿದ ಅನಕ್ಷರಸ್ಥ ಕೊರಗ ಮಹಿಳೆ ಪಡುಕೋಣೆಯ ಸೂರು ಅವರನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಅನಕ್ಷರಸ್ಥೆಯಾದರೂ ಸೂರು ಪ್ರತಿಯೊಂದು ಚುನಾವಣೆಯಲ್ಲೂ ಮತದಾನ ಮಾಡಿದ್ದಾರೆ. ಮನೆಯ ಸಮೀಪದಲ್ಲಿರುವ ಹೈಸ್ಕೂಲ್‌ನಲ್ಲಿ ಅವರು ಮತದಾನ ಮಾಡುತಿದ್ದು, ಇದುವರೆಗೆ ಒಂದೇ ಒಂದು ಚುನಾವಣೆಯನ್ನು ಆಕೆ ತಪ್ಪಿಸಿಕೊಂಡಿಲ್ಲವಂತೆ.
ಅದೇ ರೀತಿ ಕುಂದಾಪುರ ತಾಲೂಕು ಉಪ್ಪಿನಕುದ್ರುನ ರಾಧಾಕೃಷ್ಣ ಮಯ್ಯ ಅವರನ್ನು ಸಹ ಇಂದು ಸನ್ಮಾನಿಸಲಾಯಿತು. 72ರ ಹರೆಯದ ರಾಧಾಕೃಷ್ಣ ಮಯ್ಯ ಅಂಧರು. ಅಂಗವೈಕಲ್ಯ ಅವರ ಮತದಾನದ ಹಕ್ಕನ್ನು ಚಲಾಯಿಸುವುದಕ್ಕೆ ಯಾವುದೇ ಅಡ್ಡಿಯನ್ನುಂಟು ಮಾಡಿಲ್ಲ.