ಅಲಿಗಢ ಮುಸ್ಲಿಂ ವಿ.ವಿ.ಯಲ್ಲಿ ‘ತಿರಂಗ ಯಾತ್ರೆ’: ಬಿಜೆಪಿ ವಿದ್ಯಾರ್ಥಿ ನಾಯಕರಿಗೆ ನೋಟಿಸ್

Update: 2019-01-25 16:21 GMT

ಅಲಿಗಡ, ಜ. 25: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಅನುಮತಿ ಇಲ್ಲದೆ ‘ತಿರಂಗ ಯಾತ್ರೆ’ ನಡೆಸಿ ಗಲಭೆಗೆ ಕಾರಣರಾದ ವಿದ್ಯಾರ್ಥಿ ನಾಯಕರಿಗೆ ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯ ನೋಟಿಸು ಜಾರಿ ಮಾಡಿದೆ. ನಾವು ನಿಯಮ ಪಾಲಿಸುತ್ತೇವೆ. ಕ್ಯಾಂಪಸ್‌ನಲ್ಲಿ ಮೋಟಾರ್‌ಸೈಕಲ್ ರ್ಯಾಲಿ ನಡೆಸುವುದರಿಂದ ವಿದ್ಯಾರ್ಥಿಗಳ ಧ್ರುವೀಕರಣವಾಗುತ್ತದೆ ಎಂಬುದು ನಮ್ಮ ಭಾವನೆ ಎಂದು ವಿಶ್ವವಿದ್ಯಾನಿಲಯ ಹೇಳಿದೆ. ಆದರೆ, ಬಿಜೆಪಿ ವಿದ್ಯಾರ್ಥಿ ಸಂಘಟನೆಯ ನಾಯಕರು ಇದನ್ನು ನಿರಾಕರಿಸಿದ್ದಾರೆ ಹಾಗೂ ವಿಶ್ವವಿದ್ಯಾನಿಲಯದ ಈ ನಿಲುವನ್ನು ಟೀಕಿಸಿದ್ದಾರೆ. ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ಕೂಡ ವಿಶ್ವವಿದ್ಯಾನಿಲಯದ ನಿಲುವಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರ್ಯಾಲಿ ನಡೆಸಿದ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ದಲ್ವೀರ್ ಸಿಂಗ್ ಅವರ ಮೊಮ್ಮಗ ಅಜಯ್ ಸಿಂಗ್‌ಗೆ ವಿ.ವಿ. ನೋಟಿಸ್ ಜಾರಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News