×
Ad

ಹೆರಾಯಿನ್ ಮಾರಾಟಕ್ಕೆ ಯತ್ನ: ಆರೋಪಿ ಸಹಿತ 3.63 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2019-01-25 22:05 IST

ಮಂಗಳೂರು, ಜ.25: ಪಂಜಿಮೊಗರು ವಿದ್ಯಾನಗರದಲ್ಲಿನ ಖಾಲಿ ಮೈದಾನದಲ್ಲಿ ಹೆರಾಯಿನ್-ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಶುಕ್ರವಾರ ಕಾವೂರು ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹರೆಕಳ ರಾಜಾಗುಡ್ಡೆ ನಿವಾಸಿ ನೌಶದ್ (34) ಬಂಧಿತ ಆರೋಪಿ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ಶುಕ್ರವಾರ ಪಂಜಿಮೊಗರು ವಿದ್ಯಾನಗರದ ಖಾಲಿ ಮೈದಾನದಲ್ಲಿ ಗಾಂಜಾ ಹಾಗೂ ಹೆರಾಯಿನ್ ಮಾರಾಟ ಮಾಡುತ್ತಿದ್ದಾನೆಂಬ ಆರೋಪದ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿದೆ.

ಆರೋಪಿಗಳಿಂದ 32 ಸಾವಿರ ರೂ. ಮೌಲ್ಯದ  ಹೆರಾಯಿನ್, ಸುಮಾರು 20 ಸಾವಿರ ರೂ. ಮೌಲ್ಯದ ಗಾಂಜಾ, ಗಾಂಜಾ ಹಾಗೂ ಹೆರಾಯಿನ್ ತೂಕ ಮಾಡಲು ಉಪಯೋಗಿಸುತ್ತಿದ್ದ ಇಲೆಕ್ಟ್ರಾನಿಕ್ ತೂಕ ಮಾಪಕ, ಮೊಬೈಲ್ ಫೋನ್, 10 ಸಾವಿರ ರೂ. ನಗದು ಹಾಗೂ ಮಾದಕ ದ್ರವ್ಯ ಸಾಗಾಟಕ್ಕೆ ಬಳಸುತ್ತಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು ಸುಮಾರು 3,63,200 ರೂ. ಮೌಲ್ಯದ ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News