ಪ್ರವಾದಿ ನಿಂದನೆ: ವಳಚ್ಚಿಲ್ ಕೇಂದ್ರ ಮಸೀದಿಯಲ್ಲಿ ಪ್ರತಿಭಟನೆ
Update: 2019-01-25 22:20 IST
ಫರಂಗಿಪೇಟೆ, ಜ. 25: ವಳಚ್ಚಿಲ್ ಕೇಂದ್ರ ಜುಮ್ಮಾ ಮಸೀದಿ ಇದರ ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರನ್ನು ನಿಂದನೆ ಮಾಡಿದ ಸುವರ್ಣ ಚಾನಲ್ ನಿರೂಪಕ ಅಜಿತ್ ಹನುಮಕ್ಕರ್ ವಿರುದ್ಧ ಮೊಕದ್ದಮೆ ದಾಖಲಿಸಲು ಒತ್ತಾಯಿಸಿ ವಳಚ್ಚಿಲ್ ನಲ್ಲಿ ಪ್ರತಿಭಟನಾ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭ ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷರಾದ ಹಮೀದ್ ಹಾಜಿ, ಸದಸ್ಯರಾದ ಅಡ್ಯಾರ್ ಪಂಚಾಯತ್ ಸದಸ್ಯ ಯಾಸೀನ್ ಅರ್ಕುಳ, ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ವಳಚ್ಚಿಲ್ ಪದವು ಖತೀಬ್ ಖಲೀಲ್ ದಾರಿಮಿ, ಕೊಪ್ಪಳ ಜುಮಾ ಮಸೀದಿಯ ಖತೀಬ್ ಅಬೂಬಕರ್ ಲತ್ವೀಫಿ ಉಪಸ್ಥಿತರಿದ್ದರು ಹಾಗೂ ಜಮಾತಿನ ಹಿರಿಯರು ಹಾಗೂ ಯುವಕರು ಬಹಳ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.