×
Ad

ಪುತ್ತಿಗೆ ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣ ರಾಜ್ಯೋತ್ಸವ

Update: 2019-01-26 18:40 IST

ಮೂಡುಬಿದಿರೆ, ಜ.26: ಪುತ್ತಿಗೆಲ್ಲಿರುವ ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 70ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಅಲ್ ಫುರ್ಖಾನ್ ಆಲಿಮಾ ಕಾಲೆಜಿನ ಪ್ರಾಂಶುಪಾಲ ಶೇಖ್ ಅಬ್ದುಲ್ ಮುಸವ್ವಿರ್ ಉಮ್ರಿ ಮದನಿ ಧ್ವಜಾರೋಹಣ ನೆರವೇರಿಸಿದರು. ಬಳಿಕಮ ಮಾತನಾಡಿದ ಅವರು, ದೇಶದ ಸಂವಿಧಾನವು ಅರಿಯುವಲ್ಲಿ ನಾಗರಿಕರು ವಿಫಲರಾದ ಕಾರಣ ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದಾರೆ. ಆದುದರಿಂದ ವಿದ್ಯಾರ್ಥಿ ಮಟ್ಟದಲ್ಲೇ ಸಂವಿಧಾನವನ್ನು ಅರಿತು ಪೋಷಿಸಬೇಕೆಂದು ಕರೆಕೊಟ್ಟರು.

ವಿದ್ಯಾರ್ಥಿಗಳಾದ ಮುಸಾಬ್ ಬಿನ್ ಅಶ್ಫಾಕ್ ಇಂಗ್ಲಿಷ್‌ನಲ್ಲಿ, ಝುವೇರ್ ಅಹ್ಮದ್ ಅರೆಬಿಕ್‌ನಲ್ಲಿ ಹಾಗೂ ಮುಹಮ್ಮದ್ ಸ್ವಾದಿಕ್ ಹಿಂದಿಯಲ್ಲಿ ಭಾಷಣ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಟ್ರಸ್ಟಿಗಳಾದ ಮುಹಮ್ಮದ್ ಅಶ್ಫಾಕ್, ಆಡಳಿತಾಧಿಕಾರಿ ಮುಹಮ್ಮದ್ ಶಹಾಂ, ತಾಂತ್ರಿಕ ಆಡಳಿತಾಧಿಕಾರಿ ನೂರ್ ಮುಹಮ್ಮದ್, ವೆಲ್ಫೇರ್ ಮ್ಯಾನೇಜರ್ ಆಕಿಬ್ ಜಾವೇದ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅಹ್ಮದ್ ಫಾಝ ಸ್ವಾಗತಿಸಿದರು. ಮಫಾಝ್ ಅಹ್ಮದ್ ವಂದಿಸಿದರು. ಮುಹಮ್ಮದ್ ನುಮಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News