ಸಂವಿಧಾನದಲ್ಲಿ ಬದಲಾವಣೆಗೆ ಅವಕಾಶವಿದೆ: ಸಹಾಯಕ ಆಯುಕ್ತ ಸಾಜಿದ್ ಮುಲ್ಲಾ
ಭಟ್ಕಳ, ಜ. 26: ಸಂವಿಧಾನ ಎನ್ನುವುದು ನಿಂತ ನೀರಲ್ಲ ಅದು ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಒಳಪಟ್ಟಿದೆ. ಮುಂದೆಯೂ ಬದಲಾವಣೆಗೆ ಅವಕಾಶವಿದ್ದು ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ಭಾರತೀಯ ಪ್ರಜೆ ತನ್ನ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಭಟ್ಕಳ ಉಪವಿಭಾಗದ ದಂಡಾಧಿಕಾರಿ ಹಾಗೂ ಸಹಾಯಕ ಆಯುಕ್ತ ಸಾಜಿದ್ ಆಹ್ಮದ್ ಮುಲ್ಲಾ ಹೇಳಿದರು.
ಅವರು ನಗರದ ನವಾಯತ್ ಕಾಲೋನಿಯಲ್ಲಿರುವ ವೈಎಂಎಸ್‍ಎ ತಾಲೂಕು ಕ್ರೀಡಾಂಗಣದಲ್ಲಿ ಭಟ್ಕಳ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಭಟ್ಕಳ ಹಾಗೂ ಪಟ್ಟಣ ಪಂಚಾಯತ್ ಜಾಲಿ ಇವರ ಸಂಯುಕ್ತ ಆಶ್ರಯದಲ್ಲಿ 70ನೇ ಗಣರಾಜ್ಯೋತ್ಸದ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತ ಒಂದು ಅಖಂಡ ದೇಶ. ಭಾರತಕ್ಕೆ ನೂರಾರು ವರ್ಷವಿದೆ ಬ್ರಿಟಿಷ್ ಸಂಕೋಲೇಯಿಂದ ಮುಕ್ತಗೊಂಡು ಸ್ವಾತಂತ್ರ್ಯ ಪಡೆದ ನಂತರ 1950 ಜನವರಿ 26 ರಂದು ವಿಶೇಷವಾಗಿ ಸ್ವಾತಂತ್ರ್ಯ ಪಡೆದು ನಮ್ಮ ರಾಷ್ಟ್ರಕ್ಕೆ ಭುನಾದಿಯಾಗಿ ದೇಶಕ್ಕೆ ತನ್ನದೇಯಾದ ಒಂದು ಸುಭದ್ರವಾದ ಆಡಳಿತ ಸರ್ಕಾರ ನೀಡುವುದಕ್ಕೆ ಭಾರತ ಸಂವಿಧಾನ ಜಾರಿಗೆ ಬಂದಿದೆ. ಬೇರೆ ದೇಶಕ್ಕೆ ಹೋಲಿಸಿದರೆ ಭಾರತ ಯಾವುದೇ ಕುಟುಂಬದ ರಾಜರ ಕೈ ವಶದಲಿಲ್ಲ. ಇಲ್ಲಿ ಗಣರಾಜ್ಯ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಅವರಿಂದ ಆಯ್ಕೆಯಾದ ರಾಷ್ಟ್ರಪತಿಗಳು ನಮ್ಮ ದೇಶದ ಮುಖ್ಯಸ್ಥರಾಗಿರುತ್ತಾರೆ. ಯಾವುದೇ ಕುಟುಂಬ ರಾಜಕಾರಣ, ರಾಜಕೀಯ ಅಥವಾ ರಾಜ ಮನೆತನಗಳು ಆಡಳಿತ ನಡೆಸುದಿಲ್ಲ ಇದು ನಾವು ಹೆಮ್ಮೆ ಪಡಬೇಕಾದ ವಿಷಯವಾಗಿದೆ. ದೇಶವು ಈಗಾಗಲೇ ಎಲ್ಲಾ ಕ್ಷೇತ್ರ ವಿಭಾಗದಲ್ಲಿಯೂ ಮುನ್ನುಗ್ಗುತ್ತಿದ್ದು, ಪ್ರಜೆಗಳಾದ ನಾವು ಸಹ ದೇಶದ ಅಭಿವೃದ್ಧಿಗೆ ಪೂರಕವಾಗುವಂತೆ ಬದುಕಬೇಕು. ಹಿರಿಯರು ನಮಗೆ ನೀಡಿದ ಸ್ವಾತಂತ್ರ್ಯದ ಕೊಡುಗೆಯನ್ನು ನಾವುಗಳು ಅದನ್ನು ವಿವೇಚನೆಯಿಂದ ಬಳಸಿ ಪ್ರಗತಿಯನ್ನು ಸಾಧಿಸಬೇಕು .ಯಾವ ಕಾಲದವರೆಗೂ ಸೂರ್ಯ ಚಂದ್ರ ಬೆಳೆಗುತ್ತಿರುತ್ತದೆಯೋ ಅಲ್ಲಿ ತನಕವೂ ನಮ್ಮ ಸಂವಿಧಾನ ಬೆಳೆಗುತ್ತಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸುನೀಲ್ ನಾಯ್ಕ, ಇದು ಒಂದು ಅದ್ಭುತ ಅವಿಸ್ಮರಣೀಯ ದಿನವಾಗಿದ್ದು. ಇಂದಿನ ಯುವಪೀಳಿಗೆ ಜ.26ರ ದಿನವನ್ನು ರಜಾ ದಿನವಾಗಿ ಕಳೆಯುತ್ತಿರುವುದು ದುಃಖದ ಸಂಗತಿಯಾಗಿದೆ. ಈ ದಿನಕ್ಕೊಸಕರ ನಮ್ಮ ಸ್ವಾತಂತ್ರ್ಯ ಹೋರಾಟಗಾರ ಅತ್ಯಧಿಕ ಶ್ರಮ ಹಾಗೂ ಬಲಿದಾನ ಮದ್ಯೆ ಇವತ್ತು ಈ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಒಂದು ದಿನವಾದರೂ ನಮ್ಮ ಹಿಂದಿನ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟಗಾರನ್ನು ಸ್ಮರಿಸಬೇಕಾಗಿದೆ.ಇತಿಹಾಸ ಒಂದು ಮನೋರಂಜನೆಯ ವಸ್ತುವಾಗದೆ ಇಂದಿನ ಯುವ ಪೀಳಿಗೆ ಅದನ್ನು ಮನದಟ್ಟು ಮಾಡಿಕೊಂಡು ಈ ದಿನದಂದು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿದ ಬಳಿಕ ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ ತೆರೆದ ವಾಹನದಲ್ಲಿ ಪೆರೇಡ್ ವೀಕ್ಷಣೆಗೆ ಮಾಡಿದರು.
ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ, ಹಾಗೂ ಇಲಾಖಾವಾರು ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿಗಳಿಂದ ಹಾಗೂ ಪೋಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳಿಂದ ಸುಂದರ ಪಥ ಸಂಚಲನ ನಡೆಯಿತು.
ನಂತರ ಆಯ್ದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಮಹಿಳೆಯ ಮೇಲೆ ಆಗುತ್ತಿರುವ ಅತ್ಯಾಚಾರದ ಕುತಿರ ಜಾಗೃತಿ ನೃತ್ಯರೂಪಕ ಎಲ್ಲರ ಗಮನ ಸೆಳೆಯಿತು. ಮತ್ತು ಅಂಜುಮನ್ ಶಾಲೆಯ ವಿದ್ಯಾರ್ಥಿಗಳು ಮಾಡಿದ ಪಿರಾಮಿಡ್ ಆಕರ್ಷಣೆಯಾಗಿತ್ತು. ಹಾಗೂ ಸ್ನೇಹ ವಿಶೇಷ ಮಕ್ಕಳ ಮನರಂಜನೆ ಕಾರ್ಯಕ್ರಮ ಮತ್ತು ಪಥ ಸಂಚಲನ ಪ್ರಮುಖ ಆಕರ್ಷಣೆಯಾಗಿತ್ತು.
ಕಾರ್ಯಕ್ರಮದ ವೇದಿಕೆಯಲ್ಲಿ ತಹಶಿಲ್ದಾರರ ವಿ.ಎನ್.ಬಾಡಕರ್, ಪುರಸಭಾ ಅಧ್ಯಕ್ಷ ಮಹ್ಮದ್ ಸಾದಿಕ್ ಮಟ್ಟಾ, ಉಪಾಧ್ಯಕ್ಷ ಕೆ.ಎಂ.ಅಶ್ಫಾಖ್, ಜಾಲಿ ಪಟ್ಟಣ ಪಂ.ಅಧ್ಯಕ್ಷ ಆದಂ ಪಣಂಬೂರ್, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್ ಮುಂಜಿ, ಸಿ.ಪಿ.ಐ ಕೆ.ಎಲ್ ಗಣೇಶ ಮುಂತಾದವರು ಉಪಸ್ಥಿತರಿದ್ದರು.