×
Ad

ಬಜಾಲ್ : ಸ್ನೇಹ ಪಬ್ಲಿಕ್ ಸ್ಕೂಲ್ ವತಿಯಿಂದ ಗಣರಾಜಯೋತ್ಸವ

Update: 2019-01-26 19:23 IST

ಬಜಾಲ್, ಜ. 26: ಸ್ನೇಹ ಪಬ್ಲಿಕ್ ಸ್ಕೂಲ್ ಬಜಾಲ್ ಪಕ್ಕಲಡ್ಕ  ಇದರ ವತಿಯಿಂದ 70ನೇ ಗಣರಾಜೋತ್ಸವವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಅನುಪಮಾ ಮಹಿಳಾ ಮಾಸಿಕ ಮಂಗಳೂರು ಇದರ ಸಂಪಾದಕಿಯೂ ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಶಹನಾಝ್ ಎಂ ಹಾಗು ಉದ್ಯಮಿ ತಾಜ್ ಸೈಕಲ್ , ಬಿಳಿ ಚುಕ್ಕೆ ಪ್ರಕಾಶನದ ಅಧ್ಯಕ್ಷರು ಆಗಿರುವ ಮುತ್ತಲೀಬ್ ಭಾಗವಹಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ನಾಗರತ್ನ ಅಥಿತಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ನಂತರ ಮಕ್ಕಳಿಂದ ಸ್ವಾಗತ ಗೀತೆ ಹಾಡಲಾಯಿತು. ಶಹನಾಝ್ ಎಂ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು.

ಶಾಲಾ ವತಿಯಿಂದ ಮಕ್ಕಳಿಗಾಗಿ ಆಯೋಜಿಸಿದ " ನನ್ನ ದೇಶ ನನ್ನ ಕನಸು" ಎಂಬ ವಿಷಯದಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಯಿತು.

ಮಕ್ಕಳಿಂದ ಹಲವಾರು ಕಾರ್ಯಕ್ರಮ ನಡೆಯಿತು.

ಅಧ್ಯಾಪಕಿ ನುಷ್ರತ್ ಖುರೇಶ್ ಕಾರ್ಯಕ್ರಮ ನಿರೂಪಿಸಿದರು. ಫೌಝಿಯಾ ವಂದಿಸಿದರು. ಶಾಲಾ ಸಂಚಾಲಕರಾದ ಯೂಸಫ್ ಪಕ್ಕಲಡ್ಕ , ಹೆತ್ತವರ ಸಂಘದ ಅಧ್ಯಕ್ಷ ಪಿ. ಬಿ ಮುಹಮ್ಮದ್ ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ಕೋಶಾಧಿಕಾರಿ ನೂರುಲ್ ಅಮೀನ್ ಕೆ.ಪಿ ಉಪಸ್ಥಿತರಿದ್ದರು  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News