ಪಕ್ಕಲಡ್ಕದಲ್ಲಿ ಗಣರಾಜ್ಯೋತ್ಸವ ಆಚರಣೆ
ಪಕ್ಕಲಡ್ಕ, ಜ. 26: ಗಣರಾಜ್ಯೋತ್ಸವ ಪ್ರಯುಕ್ತ ಬಜಾಲ್ ಪಕ್ಕಲಡ್ಕ ಮದರಸದಲ್ಲಿ ಧ್ವಜರೋಹಣ ನಡೆಯಿತು.
ಮದರಸ ಸದರ್ ಉಸ್ತಾದ್ ಅನ್ವರ್ ಅಝ್ಹರಿ ಸ್ವಾಗತಿಸಿದರು. ಜಮಾಅತ್ ಅಧ್ಯಕ್ಷರಾದ ಹಾಜಿ ಅಬೂಬಕರ್ ಧ್ವಜರೋಹಣಕ್ಕೆ ನೇತೃತ್ವ ನೀಡಿದರು. ಸ್ಥಳೀಯ ಖತೀಬರಾದ ನಝೀರ್ ಅಝ್ಹರಿ ಮುಖ್ಯ ಭಾಷಣ ಮಾಡಿ ಭಾರತವು ವಿವಿದ ಜಾತಿ ಧರ್ಮಗಳು ಇರುವ ದೇಶವಾಗಿದ್ದು ಎಲ್ಲರಿಗೂ ಅವರವರ ಧರ್ಮ ಮತ್ತು ಆಚಾರ ವಿಚಾರಗಳು ನಡೆಸಿಕೊಂಡು ಹೋಗಲು ಮತ್ತು ಪ್ರಚಾರ ಪಡಿಸಲು ಸಂವಿಧಾನ ಸ್ವಾತಂತ್ರ್ಯ ನೀಡಿದೆ. ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಈ ದೇಶದ ಸಂವಿದಾನವನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಅವಕಾಶ ನೀಡಬಾರದು ಎಂದರು.
ಭಾರತದ ಐಕ್ಯತೆ ಅಬಿವ್ರಧ್ಧಿಗಾಗಿ ಎಲ್ಲರೂ ಪ್ರಯತ್ನಿಸಬೇಕೆಂದು ಕರೆ ನೀಡಿದರು. ಮದರಸ ಮುಅಲ್ಲಿಮರಾದ ಹಾರಿಸ್ ಅಶ್ರಫಿ, ಮುಹ್ಯುಧ್ಧೀನ್ ಮುಸ್ಲಿಯಾರ್, ಜಮಾಅತ್ ಉಪಾಧ್ಯಕ್ಷರಾದ ಶರೀಫ್ ಪಿ, ಮದರಸ ಉಸ್ತುವಾರಿ ನಿಯಾಝ್, ಜಮಾಅತ್ ಸದಸ್ಯ ರಿಯಾಝ್ ಪೈಂಟರ್, ಮಾಜಿ ಉಪಾಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್,ಎಸ್ ಬಿ ವಿ ಕಾರ್ಯದರ್ಶಿ ನಾಝೀಂ, ಉಪಾಧ್ಯಕ್ಷ ಶುಹೈಬ್, ಶಂಸುಲ್ ಉಲಮಾ ಕ್ಯಾಂಪಸ್ ವಿಂಗ್ ಕಾರ್ಯದರ್ಶಿ ಸಜ್ಜಾದ್, ಉಪಾಧ್ಯಕ್ಷ ಶಫೀಖ್, ಅನೀಸ್ , ರಾಶಿದ್, ಸಲ್ಮಾನ್, ತೌಫೀಖ್ ಮುಂತಾದವರು ಉಪಸ್ಥಿತರಿದ್ದರು.