ಅಡ್ಡೂರು: ಮನೆ ತೆರಿಗೆ ಇಳಿಸುವಂತೆ ಒತ್ತಾಯಿಸಿ ಎಸ್ಡಿಪಿಐಯಿಂದ ಗುರುಪುರ ಗ್ರಾ.ಪಂ.ಗೆ ಮನವಿ

Update: 2019-01-26 14:05 GMT

ಕೈಕಂಬ, ಜ. 26: ಏರಿಕೆಯಾಗಿರುವ ಮನೆ ತೆರಿಗೆಯನ್ನು ಇಳಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಅಡ್ಡೂರು ಗ್ರಾಮ ಸಮಿತಿ  ವತಿಯಿಂದ ಶುಕ್ರವಾರ ಗುರುಪುರ ಗ್ರಾ.ಪಂ.ಗೆ ಮನವಿ ಸಲ್ಲಿಸಲಾಯಿತು.

ಸಮೀಪದ ಪಂಚಾಯತ್ ಗಳಿಗೆ ಹೋಲಿಸಿದರೆ ಗುರುಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ತೆರಿಗೆ ದುಪ್ಪಟ್ಟು ಆಗಿದ್ದು, ಇದರಿಂದ ಆರ್ಥಿಕ ವ್ಯವಸ್ಥೆಯಿಂದ ಕಂಗೆಟ್ಟಿರುವ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ. ಆದ್ದರಿಂದ ತೆರಿಗೆಯನ್ನು ಪುನರ್ ಪರಿಶೀಲನೆ ನಡೆಸಿ ಇಳಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಇದೇ ವೇಳೆ ಎಸ್ಡಿಪಿಐ ಎಚ್ಚರಿಕೆ ನೀಡಿದೆ.

ಎಸ್ಡಿಪಿಐ ಅಡ್ಡೂರು ಗ್ರಾಮ ಸಮಿತಿಯ ಅಧ್ಯಕ್ಷ ಎ.ಕೆ.ಮುಸ್ತಫಾ, ಮುಖಂಡರಾದ ಅಶ್ರಫ್ ನಡುಗುಡ್ಡೆ, ಎ.ಕೆ ಜಬ್ಬಾರ್, ಅಬ್ದುಲ್‌ ಸತ್ತಾರ್, ಹಕೀಮ್ ಪಾಂಡೇಲ್, ಎ.ಪಿ. ನಾಸೀರ್ ಹಾಗೂ ಅಬ್ದುಲ್‌ ಸಲಾಂ.ಟಿ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News