×
Ad

ಸಂವಿಧಾನದ ರಕ್ಷಣೆ ಎಲ್ಲರ ಹೊಣೆ: ರಮಾನಾಥ ರೈ

Update: 2019-01-26 20:40 IST

ಮಂಗಳೂರು, ಜ.26: ಮತೀಯವಾದದಿಂದ ದೇಶಕ್ಕೆ ಅಪಾಯವಿದೆ. ಕಾಂಗ್ರೆಸ್ಸಿಗರು ಮತೀಯವಾದವನ್ನು ವಿರೋಧಿಸಿ ಪ್ರಜಾಪ್ರಭುತ್ವದ ರಕ್ಷಣೆಯ ಜವಾಬ್ದಾರಿ ವಹಿಸಬೇಕು. ಎಲ್ಲರಿಗೂ ಶಕ್ತಿ ಕೊಟ್ಟ ಅಂಬೇಡ್ಕರ್‌ರವರ ಸಂವಿಧಾನವನ್ನು ಉಳಿಸುವ ಹೋರಾಟವನ್ನು ಕಾಂಗ್ರೆಸ್ ಮಾಡುತ್ತಿದೆ. ಇದು ರಾಷ್ಟ್ರ ಕಟ್ಟುವ ಕೆಲಸವಾಗಿದ್ದು ನಮ್ಮೆಲ್ಲರ ಹೊಣೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರುಗಿದ 70ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಇದಕ್ಕೂ ಮುನ್ನ ಕಾಂಗ್ರೆಸ್ ಸೇವಾದಳದ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್‌ಕುಮಾರ್ ನೆರವೇರಿಸಿದರು.

ಬಳಿಕ ಸಭಾಧ್ಯಕ್ಷತೆ ವಹಿಸಿದ ಮಾತನಾಡಿದ ಅವರು, ಶಕ್ತಿ ಕಾರ್ಯಕ್ರಮದ ಮೂಲಕ ಪಕ್ಷದ ಬಲವರ್ಧನೆಯಾಗುತ್ತಿದ್ದು, ಪ್ರಿಯಾಂಕ ಗಾಂಧಿಯವರ ಪ್ರವೇಶವು ಪಕ್ಷದಲ್ಲಿ ಹೊಸ ಸಂಚಲನ ಉಂಟು ಮಾಡಿದೆ ಎಂದರು. ಈ ಸಂದರ್ಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಆಚರಿಸಲಾಯಿತು. ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಗಣರಾಜ್ಯೋತ್ಸವದ ಶುಭಾಶಯಗಳನ್ನು ಅರ್ಪಿಸಿದರು.

ಸಮಾರಂಭದಲ್ಲಿ ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಮಾಜಿ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಡಾ.ರಘು, ಕೆಪಿಸಿಸಿ ಕಾರ್ಯದರ್ಶಿ ಜಿ.ಎ. ಬಾವ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಾಲೆಟ್ ಪಿಂಟೋ, ಕಾಂಗ್ರೆಸ್ ಮುಖಂಡ ಕಣಚೂರು ಮೋನು, ಸೇವಾದಳ ಅಶ್ರಫ್, ಬ್ಲಾಕ್ ಅಧ್ಯಕ್ಷರಾದ ಸುರೇಂದ್ರ ಬಿ.ಕಂಬಳಿ, ಸಂತೋಷ್ ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ, ಪ್ರಶಾಂತ್ ಕಾಜವ, ಹಾಜಿ ಟಿ.ಎಸ್ ಅಬ್ದುಲ್ಲಾ, ಮಾಧವ ಮಾವೆ, ಪ್ರಸಾದ್ ರಾಜ್ ಕಾಂಚನ್, ಟಿ.ಕೆ. ಸುಧೀರ್, ಬಿ.ಎಂ. ಭಾರತಿ, ಸಿ.ಎಂ ಮುಸ್ತಫಾ, ಪದ್ಮನಾಭ ನರಿಂಗಾನ, ಅಬೂಬಕರ್ ಕುದ್ರೋಳಿ, ನೀರಜ್ ಪಾಲ್, ಮರಿಯಮ್ಮ ಥೋಮಸ್, ಹಿಲ್ಡಾ ಆಳ್ವ, ಮಲಾರ್ ಮೋನು, ಬಿ.ಎಂ. ಹಮೀದ್, ಎಂ.ಪಿ. ಮನುರಾಜ್, ಖಾಲಿದ್ ಉಜಿರೆ, ನಝೀರ್ ಬಜಾಲ್, ಆಶಾ ಡಿಸಿಲ್ವಾ, ಸುಮಂತ್ ರಾವ್, ನಿತ್ಯಾನಂದ ಶೆಟ್ಟಿ, ಪೀಯೂಸ್ ಮೊಂತೆರೋ, ಅಬ್ದುಲ್ ಸಲೀಂ, ಆರಿಫ್ ಬಾವ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News