×
Ad

ಅಮೆಮಾರ್ ಮದರಸದಲ್ಲಿ ಗಣರಾಜ್ಸೋತ್ಸವ

Update: 2019-01-26 20:51 IST

ಫರಂಗಿಪೇಟೆ, ಜ. 26: ಬದ್ರಿಯಾ ಮದರಸ ಅಮೆಮಾರ್ ಹಾಗೂ ಎಸ್ಕೆಎಸ್ಬಿವಿ ಮಿತ್ತಬೈಲ್ ರೇಂಜ್ ವತಿಯಿಂದ ಅಮೆಮಾರ್ ಮದರಸ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಫರಂಗಿಪೇಟೆ ಮದರಸ ಮುಅಲ್ಲಿಮ್ ಸೈಫುದ್ದೀನ್ ಕೌಸರಿ ನಮ್ಮ ಪೂರ್ವಿಕರ ತ್ಯಾಗ ಬಲಿದಾನದ  ಸ್ವಾತಂತ್ರ್ಯ ಹೊರಾಟದಿಂದ ನಮ್ಮ ದೇಶ ಸ್ವಾತಂತ್ರ್ಯಗೊಂಡು ಅದರ ಫಲವಾಗಿ ಇಂದು ನಾವು ಗಣರಾಜ್ಯೋತ್ಸವ ಆಚರಿಸುತ್ತಿದೇವೆ. ಮುಸ್ಲಿಮರು ಇಂದು ದೇಶ ಪ್ರೇಮದ ಸವಾಲನ್ನು ಎದುರಿಸುತ್ತಿದ್ದಾರೆ. ಮುಸ್ಲಿಮರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಮಕ್ಕಳನ್ನು ಒತ್ತೆ ಇಟ್ಟು ತ್ಯಾಗ ಮಾಡಿದವರಾಗಿದ್ದಾರೆ ಎಂದು ಹೇಳಿದರು.

ಮುಸ್ತಫ ಪೈಝಿ ಅಧ್ಯಕ್ಷತೆ ವಹಿಸಿದ್ದರು. ಅಮೆಮಾರ್ ಮಸೀದಿ ಅಧ್ಯಕ್ಷ ಉಮರಬ್ಬ ದ್ವಜಾರೋಹಣಗೈದರು. ಸ್ಥಳಿಯ ಖತೀಬ್ ಅಬೂಸ್ವಾಲಿಹ್ ಪೈಝಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಮಸೀದಿಯ ಪ್ರ. ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್,  ಯೂಸುಫ್ ಮುಸ್ಲಿಯಾರ್ ತುಂಬೆ, ಅಹ್ಮದ್ ರಾಝಿ ಬಾಖವಿ ಪರ್ಲಿಯಾ, ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಸಿರಾಜುದ್ದೀನ್ ಮದನಿ, ಉಸ್ಮಾನ್ ಹನೀಫಿ,  ಶಬೀರ್ ಮೌಲವಿ ಅಮೆಮಾರ್, ಅಬೂಬಕರ್ ಮದನಿ,  ಯಾಕೂಬ್ ಪೈಝಿ, ಬಾತೀಷ್ ಅಝ್ಝರಿ,  ಜಾಫರ್ ಮೌಲವಿ, ಮುಹಮ್ಮದ್ ಷರೀಫ್ ಮೌಲವಿ, ಇರ್ಷಾದ್ ಮಿಸ್ಬಾಹಿ, ನೂಹ್ ಮಾನ್ ದಾರಿಮಿ, ಇಕ್ಬಾಲ್ ಮೌಲವಿ,  ಮಸೀದಿ ಸದಸ್ಯರಾದ ಅಬ್ದುಲ್ ಹಮೀದ್, ಅಬ್ದುಲ್ ಖಾದರ್, ಎಸ್ಕೆಎಸ್ಬಿವಿ ಶಾಖೆಯ ಬದ್ರುದ್ದೀನ್, ಮುಖ್ತಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News