ಸುಜೀರ್ ಪ್ರೌಢ ಶಾಲೆಯಲ್ಲಿ ಗಣರಾಜ್ಯೋತ್ಸವ

Update: 2019-01-26 15:24 GMT

ಫರಂಗಿಪೇಟೆ, ಜ. 26: ಪುದು ಗ್ರಾಮದ ಸುಜೀರ್ ಪ್ರೌಢ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಉಮರ್ ಫಾರೂಕು ದ್ವಜಾರೋಹಣಗೈದರು, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಅಧ್ಯಕ್ಷತೆ ವಹಿಸಿದರು.

ಸಮಿತಿ ಸದಸ್ಯರಾದ ಕಿಶೋರ್, ಝುಬೈರ್, ಇಂದಿರಾ, ದೇವಕಿ ಉಪಸ್ಥಿತರಿದ್ದರು. ಕಳೆದ ಸಾಲಿನ ಹತ್ತನೇ ತರಗತಿಯಲ್ಲಿ ಉತ್ತಮ ನಿರ್ವಹಣೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಶಾಲಾ ಪಂದ್ಯಾಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಶಾಲಾ ವಿದ್ಯಾರ್ಥಿಗಳ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾದ್ಯಾಯಿನಿ ಶಶಿಮಂಗಳ ವೈ ಸ್ವಾಗತಿಸಿ, ಜಯಪ್ರಕಾಶ್ ವಂದಿಸಿದರು ಶಿಕ್ಷಕ ಮುಹಮ್ಮದ್ ಬಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News