×
Ad

ಧರ್ಮಗಳ ನಡುವೆ ಪ್ರೀತಿ ಹುಟ್ಟಿಸಬೇಕು: ಈಶ ವಿಠಲ ಸ್ವಾಮೀಜಿ

Update: 2019-01-26 21:12 IST

ಪಡುಬಿದ್ರಿ, ಜ. 26: ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಘೋಷಣೆಯಡಿ ಗಣರಾಜ್ಯೋತ್ಸವ ಪ್ರಯುಕ್ತ ಶನಿವಾರ ಎಸ್ಕೆಎಸ್ಸೆಸ್ಸೆಫ್ ಹೆಜಮಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾನವಸರಪಳಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಮಾರು ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿ, ಧರ್ಮ ಧರ್ಮಗಳ ನಡುವೆ ಇರುವ ಭೀತಿಯನ್ನು ಹೋಗಲಾಡಿಸಿ ಪ್ರೀತಿ ಹುಟ್ಟಿಸುವ ಕಾರ್ಯ ತುರ್ತಾಗಿ ಆಗಬೇಕು. ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿಯನ್ನು ನೀಡುವ ಅಗತ್ಯವಿದೆ. ಧರ್ಮದ ಬಗ್ಗೆ ಸಂಪೂರ್ಣ ತಿಳಿಯದ ವರಿಂದ ಭೀತಿ ಹುಟ್ಟಿಸುವ ಕಾರ್ಯ ನಡೆಯುತ್ತಿದೆ. ಧಾರ್ಮಿಕತೆಯ ಕೊರತೆಯೇ ಇದಕ್ಕೆ ಕಾರಣ. ಎಳೆಯರಲ್ಲಿ ಧರ್ಮದ ಜತೆಗೆ ರಾಷ್ಟ್ರ ಭಕ್ತಿ, ಮಾತೃ ಭಕ್ತಿ ಹುಟ್ಟಿಸುವ ಕಾರ್ಯ ಆಗಬೇಕಿದೆ ಎಂದರು.

ಸಮಾರಂಭವನ್ನು ಉದ್ಘಾಟಿಸಿದ ದಕ್ಷಿಣ ಕರ್ನಾಟಕ ಜಮೀಯತುಲ್ ಉಲೆಮಾ ಪ್ರಧಾನ ಕಾರ್ಯದರ್ಶಿ ಯು.ಕೆ.ಮುಹಮ್ಮದ್ ದಾರಿಮಿ ಮಾತನಾಡಿ, ವಿವಿಧತೆಯಲ್ಲಿ ಏಕತೆ ನಮ್ಮ ಮಂತ್ರವಾಗಿದೆ. ಭಾರತದಂತಹ ಸುಂದರ ದೇಶ ಜಗತ್ತಿನಲ್ಲಿ ಮತ್ತೊಂದಿಲ್ಲ. ಬೇರಯವರ ಒಳಿತನ್ನು ಬಯಸುವ ಏಕೈಕ ರಾಷ್ಟ್ರ ಭಾರತ. ದೇಶದ ಧಾರ್ಮಿಕ ಮುಖಂಡರು ಒಂದಾಗಿ ಕೈಜೋಡಿಸಿ ದೇಶವನ್ನು ಮೇಲೆತ್ತಬೇಕು. ಮಾನವೀಯತೆಯ ಮೇಲೆ ಬಿದ್ದ ಕರಿನೆರಳನ್ನು ಸರಿಪಡಿಸ ಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೈಜೋಡಿಸಬೇಕಾಗಿದೆ ಎಂದರು.

ಮುಲ್ಕಿ ಜುಮ್ಮಾ ಮಸಿದಿಯ ಖತೀಬರಾದ ಎಸ್.ಬಿ. ಮುಹಮ್ಮದ್ ದಾರಿಮಿ ಪ್ರಸ್ತಾವಿಕ ಮಾತನಾಡಿ, ಸಂವಿಧಾನ ರಕ್ಷಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು. ಶೈಖುನಾ ಅಝ್ಹರ್ ಫೈಝಿ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಆತ್ರಾಡಿ ಖಾಝಿ ಶೈಖುನಾ ಅಲ್‍ಹಾಜ್ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ದುವಾ ನೆರವೇರಿಸಿದರು.

ಇರ್ಷಾದ್ ದಾರಿಮಿ ಮಿತ್ತಬೈಲ್, ಅಬ್ದುರ್ರಹ್ಮಾನ್ ಫೈಝಿ ಫಲಿಮಾರು, ಶಬ್ಬೀರ್ ಫೈಝಿ ಎರ್ಮಾಳು, ಉಡುಪಿ ಜಂ ಇಯ್ಯತುಲ್ ಮುಅಲ್ಲಮೀನ್ ಅಧ್ಯಕ್ಷ ಮುಹಮ್ಮದ್ ಆಲೀ ಫೈಝಿ, ಉಡುಪಿ ಜಿಲ್ಲಾ ಸ್ವಾಗತ ಸಮಿತಿಯ ಅಧ್ಯಕ್ಷ ಆಸೀಫ್ ಹನ್ನಾನ್, ಅಬ್ದುರ್ರಹ್ಮಾನ್ ದಾರಿಮಿ ಚೊಕ್ಕಬೆಟ್ಟು, ಸಲೀಂ ಫೈಝಿ ಇರ್ಷಾನೀಯ ಮೂಡಿಗೆರೆ, ರಫೀಕ್ ಹುದವಿ ತೋಡಾರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಸೈಯದ್ ಮದನಿ ಅರೆಬಿಕ್ ಕಾಲೇಜು ಪ್ರಾಂಶುಪಾಲ ಉಸ್ಮಾನ್ ಫೈಝಿ, ಮೂಡಿಗೆರೆ ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಎಂ. ಅಬ್ದುಲ್ಲ ಹಾಜಿ, ಮೂಡಿಗೆರೆ ಅಲ್ಪಸಂಖ್ಯಾತ ತಾಲೂಕು ಘಟಕದ ಅಧ್ಯಕ್ಷ ಅಕ್ರಮ ಹಾಜಿ ಮೂಡಿಗೆರೆ, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಪಿ. ಇಬ್ರಾಹಿಂ ಮಟ್ಪಾಡಿ, ದ.ಕ ಮುಸ್ಲಿಂ ಸೆಂಟರ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ದಕ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಶಾಹುಲ್ ಹಮೀದ್ ಮೆಟ್ರೋ, ದ.ಕ. ಮದ್ರಸ ಮ್ಯಾನೇಜ್‍ಮೆಂಟ್ ಅಧ್ಯಕ್ಷ ಹಾಜಿ ಐ ಮೊಯಿದಿನಬ್ಬ, ಸಯ್ಯದ್ ಆಲಿವಿ ಅಬ್ಬಾಸ್, ರಾಶಿದ್ ಯಮಾನಿ, ಅಬೂ ಆಶಿಕ್ ಬಿ.ಕೆ, ಜೆಡಿಎಸ್ ಕಾರ್ಯಾಧ್ಯಕ್ಷರು ಸುಧಾಕರ ಶೆಟ್ಟಿ, ನೌಶಾದ್ ಹಾಜಿ ಸೂರಲ್ಪಾಡಿ, ದಲಿತ ಸಂಘರ್ಷ ಸಮಿತಿಯ ಲೋಕೇಶ್ ಪಡುಬಿದ್ರಿ, ರೋಟರಿ ಕ್ಲಬ್ ಕಾರ್ಯದರ್ಶಿ ಸುಧಾಕರ ಹೆಜಮಾಡಿ, ಮುಲ್ಕಿ ಜಮಾಅತ್ ಅಧ್ಯಕ್ಷ ಇಕ್ಬಾಲ್ ಅಹಮದ್, ಶೇಖಬ್ಬ ಕೋಟೆ, ಹುಸೈನ್ ರೆಹಾನಿ, ಪಿ.ಕೆ. ಅಬೂ ಸಾಲಿಹ್ ಹಾಜಿ, ಇದಿನಬ್ಬ ಹಾಜಿ, ಮೊಯಿದಿನ್ ನಿಟ್ಟೆ, ಮೊಹಿಯುದ್ದೀನ್ ರೆಂಜಾಳ, ಹಾಜಿ ಹಮ್ಮಬ್ಬ ಮೊಯಿದಿನ್, ಶಂಸುದ್ದೀನ್ ಲಚ್ಚಿಲ್, ಸಿರಾಜುದ್ದೀನ್ ಕನ್ನಂಗಾರ್, ಇಕ್ಬಾಲ್ ಸೂಫಿ, ನಿಯಾಝ್, ಬಿ.ಎಚ್.ಅಬ್ದುಲ್ ರಹ್ಮಾನ್,, ಪಿ. ಮುಹಮ್ಮದ್ ಉಚ್ಚಿಲ, ಎಂ.ಜಿ. ಶಾಹುಲ್ ಹಮೀದ್, ಎಂ.ಎಚ್. ಮೊಯಿದಿನ್ ಹಾಜಿ ಅಡ್ಡೂರು, ಬಿಲಾಲ್ ಮೊಯಿದಿನ್ ಬೆಂಗರೆ, ಯೂಸುಫ್ ಗೊಲ್ತಮಜಲು, ವೈ. ಅಹಮದ್ ಹಾಜಿ ಉಚ್ಚಿಲ, ಹಾಜಿ ಯೂಸುಫ್ ನಿಟ್ಟೆ, ಹರ್ಷದ್ ರೆಂಜಾಳ, ಹನೀಫ್ ಕೃಷ್ಣಾಪುರ, ತಾಜ್ ಹಮೀದ್ ಕೃಷ್ಣಾಪುರ ಉಪಸ್ಥಿತರಿದ್ದರು.

ಎರ್ಮಾಳು ಖತೀಬ್ ಶಬೀರ್ ಫೈಝಿ ಮಾನವ ಸರಪಳಿಯ ಪ್ರತಿಜ್ಞಾವಿಧಿ ಬೋಧಿಸಿದರು.ಸಂಶುಲ್ ಉಲೆಮಾ ಅರೆಬಿಕ್ ಕಾಲೇಜಿನ ವಿದ್ಯಾರ್ಥಿಗಳು ಸಾರೇ ಜಹಾಂಸೆ ಅಚ್ಛಾ.. ಆಲಾಪನೆಗೈದರು. ಎಮ್.ಪಿ.ಮೊೈದಿನಬ್ಬ ಸ್ವಾಗತಿಸಿದರು.ಮೌಲಾನಾ ಹೈದರ್ ಆಲಿ ಮತ್ತು ಹನೀಫ್ ದಾರಿಮಿ ಇಡ್ಯ ಕಾರ್ಯಕ್ರಮ ನಿರ್ವಹಿಸಿದರು.ರಾಝಿ ಕನ್ನಂಗಾರು ವಂದಿಸಿದರು.

ಆಕರ್ಷನ ಜಾಥಾ: ಕನ್ನಂಗಾರ್ ಜುಮ್ಮಾ ಮಸೀದಿಯಿಂದ ಆರಂಭಗೊಂಡ ಜಾಥಾವು ಕನ್ನಂಗಾರ್ ಬೈಪಾಸ್ ಮೂಲಕ ಹೆಜಮಾಡಿ ಶಾಲಾ ಮೈದಾನಕ್ಕೆ ಬರಲಾಯಿತು. ಜಾಥಾದಲ್ಲಿ ಜೋಕಟ್ಟೆಯ ಮದರಸ ಮಕ್ಕಳ ಆಕರ್ಷಕ ಸ್ಕೌಟ್ ಹಾಗೂ ದಫ್ ಗಮನಸೆಳೆಯಿತು. ಮದರಸ ವಿದ್ಯಾರ್ಥಿಗಳು, ಎಸ್ಕೆಎಸ್ಸೆಸ್ಸೆಫ್ ಕಾರ್ಯಕರ್ತರು, ಸಾರ್ವಜನಿಕರು, ಧರ್ಮಗುರುಗಳು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News