ದೇರಳಕಟ್ಟೆ: ಸ್ನಾತಕೋತ್ತರ ಬೋಧನಾ ಕಾರ್ಯಕ್ರಮ
ಕೊಣಾಜೆ, ಜ. 26: ಆಸ್ಕಿ ಕೇಂದ್ರವನ್ನು ಕ್ಷೇಮದಲ್ಲಿ 2004ರಲ್ಲಿ ಆರಂಭಿಸಲಾಗಿದ್ದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆಸ್ಕಿ ಎದುರಿಸುವುದು ಕಠಿಣವಾಗಿದ್ದರೂ ಪಾರದರ್ಶಕವಾಗಿರುವುರಿಂದ ಈ ಕೇಂದ್ರದಿಂದಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಿದೆ ಎಂದು ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು.
ಕ್ಷೇಮ ಮೆಡಿಕಲ್ ಅಕಾಡೆಮಿಯ ಇಎನ್‍ಟಿ ವಿಭಾಗದ ಆಶ್ರಯದಲ್ಲಿ ಶನಿವಾರ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ನಡೆದ ಕ್ಷೇಮ ಇಎನ್‍ಟಿ-ಒಎಸ್‍ಸಿಇ ಕಾರ್ಯಗಾರ-2019, ಸ್ನಾತಕೋತ್ತರ ಬೋಧನಾ ಕಾರ್ಯಕ್ರಮ ಹಾಗೂ 15ನೇ ಒಎಸ್‍ಸಿಇ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕೇಂದ್ರ ಆರಂಭವಾಗಿ ನಿರಂತರ ಕಾರ್ಯಗಾರ ನಡೆಯುತ್ತಿದ್ದರೆ ಅದು ಪರೀಕ್ಷಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಕಠಿಣ ಸ್ಪರ್ಧೆಗಳು ಸವಲುಗಳು ಎದುರಗುತ್ತಿದ್ದು ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅಸ್ಕಿ ಪ್ರಯೋಜನಕರಿ ಎಂದು ಮಂಗಳೂರಿನ ಫಾ. ಮುಲ್ಲರ್ ಮೆಡಿಕಲ್ ಕಾಲೇಜು ಡೀನ್ ಪ್ರೊ. ಡಾ. ಜೆ.ಪಿ. ಆಳ್ವ ಹೇಳಿದರು.
ಕ್ಷೇಮ ಮೆಡಿಕಲ್ ಕಾಲೇಜು ಡೀನ್ ಡಾ.ಪಿ.ಎಸ್. ಪ್ರಕಾಶ್ ಮಾತನಾಡಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಉನ್ನತ ಪರೀಕ್ಷೆಯು ಕಠಿಣವಾಗಿದ್ದು, ಅದನ್ನು ಎದುರಿಸಲು ಆಸ್ಕಿಯಲ್ಲಿ ಭಾಗವಹಿಸುವುದರಿಂದ ಸಹಾಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಲಂಡನ್ ರಾಯಲ್ ಸ್ಕೂಲ್ ಆಫ್ ಸರ್ಜನ್ಸ್‍ನಿಂದ ಎಫ್‍ಆರ್‍ಸಿಎಸ್ ಫೆಲೋ ಪಡೆದ ಡಾ. ಸತೀಶ್ ಕುಮಾರ್ ಭಂಡಾರಿ ಅವರನ್ನು ಇಎನ್‍ಟಿ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಡಾ. ವಿಲಿಯಂ ಸನ್ಮಾನಿತರ ಕುರಿತು ಮಾತನಾಡಿದರು.
ಇಎನ್‍ಟಿ ವಿಭಾಗ ಮುಖ್ಯಸ್ಥೆ ಡಾ. ರಾಜೇಶ್ವರೀ ಸ್ವಾಗತಿಸಿದರು. ಡಾ. ಶ್ರೀನಾಥ್ ಕಾಮತ್ ವಂದಿಸಿದರು. ಮರೀನಾ ಸಾಲ್ದಾನಾ ಕಾರ್ಯಕ್ರಮ ನಿರೂಪಿಸಿದರು.