ಮೇಘಾಲಯ ಗಣಿ ದುರಂತ: ಗಣಿಯೊಳಗೆ ಎರಡನೇ ಮೃತದೇಹ ಪತ್ತೆ

Update: 2019-01-26 16:31 GMT

ಶಿಲಾಂಗ್, ಜ.26: ಮೇಘಾಲಯದ ಗಣಿಯೊಳಗೆ ಸಿಲುಕಿ ಮೃತಪಟ್ಟಿದ್ದ ಮತ್ತೊಬ್ಬ ಗಣಿ ಕಾರ್ಮಿಕನ ಮೃತದೇಹವನ್ನು ಮುಳುಗು ಪಡೆಯವರು 280 ಅಡಿ ಆಳದಲ್ಲಿ ಪತ್ತೆಹಚ್ಚಿರುವುದಾಗಿ ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. ಗುರುವಾರ ಒಬ್ಬ ಕಾರ್ಮಿಕನ ಮೃತದೇಹ ಪತ್ತೆಯಾಗಿತ್ತು. ಮೃತಪಟ್ಟ ಕಾರ್ಮಿಕನನ್ನು ಅಮೀರ್ ಹುಸೈನ್ ಎಂದು ಗುರುತಿಸಲಾಗಿದ್ದು ಆತನ ಮನೆಯವರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.

ದೂರ ನಿಯಂತ್ರಕ ಸಾಧನದ ಮೂಲಕ ನೀರಿನಡಿ ಕಾರ್ಯನಿರ್ವಹಿಸುವ ಯಂತ್ರವನ್ನು ಬಳಸಿ ಕಾರ್ಮಿಕರ ಮೃತದೇಹವನ್ನು ಪತ್ತೆಹಚ್ಚುವ ಕಾರ್ಯಾಚರಣೆ ಮುಂದುವರಿದಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಅಲ್ಲದೆ ಗುದ್ದಲಿಗಳು ಹಾಗೂ ಮರದಿಂದ ಮಾಡಿರುವ ಗಾಡಿಯನ್ನು ಈ ಸ್ಥಳದಲ್ಲಿ ಪತ್ತೆಹಚ್ಚಲಾಗಿದೆ ಎಂದು ರಕ್ಷಣಾ ತಂಡದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಡಿಸೆಂಬರ್ 13ರಂದು ಮೇಘಾಲಯದ ಈಸ್ಟ್ ಜೈಂಟಿಯಾ ಬೆಟ್ಟದ ಕಲ್ಲಿದ್ದಲ ಗಣಿಯಲ್ಲಿ 12ಕ್ಕೂ ಹೆಚ್ಚು ಗಣಿ ಕೆಲಸಗಾರರು ಸಿಲುಕಿ ಮೃತಪಟ್ಟಿದ್ದರು. ಪವಾಡ ಸಂಭವಿಸಬಹುದು ಮತ್ತು ಕಾರ್ಮಿಕರು ಗಣಿಯೊಳಗಿಂದ ಸುರಕ್ಷಿತವಾಗಿ ಹೊರಬರುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು. ಆದ್ದರಿಂದ ತಜ್ಞರ ಸಲಹೆ ಪಡೆದು ರಕ್ಷಣಾ ಕಾರ್ಯಾಚರಣೆ ಮುಂದುವರಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್ ಕಳೆದ ತಿಂಗಳು ಸೂಚಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News