ಗೂಗಲ್‌ನಿಂದ ಗಣರಾಜ್ಯೋತ್ಸವಕ್ಕೆ ‘ಡೂಡಲ್’ ಗೌರವ

Update: 2019-01-26 16:42 GMT

ಹೊಸದಿಲ್ಲಿ, ಜ. 26: ದೇಶದ ವಾಸ್ತುಶಿಲ್ಪ, ಸಾಂಸ್ಕೃತಿಕ ಪರಂಪರೆ ಹಾಗೂ ಅದರ ಸಮೃದ್ಧ ಜೀವ ವೈವಿಧ್ಯತೆ ಪ್ರತಿಬಿಂಬಿಸುವ ಭಾರತದ 70 ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಗೂಗಲ್ ಶನಿವಾರ ವಿಶೇಷ ಡೂಡ್ಲ್ ರೂಪಿಸಿದೆ. ವಿಸ್ತಾರವಾದ ಕ್ಯಾಂಪಸ್‌ನಲ್ಲಿ ಸಸ್ಯ ಹಾಗೂ ಪ್ರಾಣಿ ಸಂಕುಲ ಇರುವ, ಮರಗಳು ಆವರಿಸಿದ ಭವ್ಯ ರಾಷ್ಟ್ರಪತಿ ಭನವನದ ಪಾರಂಪರಿಕ ಮುಂಭಾಗದ 3ಡಿ ಪ್ರಭಾವದ ಚಿತ್ರಣವನ್ನು ಡೂಡ್ಲ್ ರೂಪಿಸಿದೆ.

ಸಮೃದ್ಧ ಬಣ್ಣದಿಂದ ಕೂಡಿದ ಈ ಚಿತ್ರದಲ್ಲಿ ರಾಷ್ಟ್ರಪತಿ ಭವನದ ಎದುರು ಇಂಗ್ಲಿಷ್‌ನ ಗೂಗಲ್‌ನ 6 ಅಕ್ಷರಗಳಿವೆ. ಪ್ರತಿಯೊಂದು ಅಕ್ಷರ ವಿಭಿನ್ನ ಶೈಲಿಯಲ್ಲಿ ಇದ್ದು, ಗಾಲ್ಫ್ ಕೋರ್ಸ್‌ನಿಂದ ಪ್ರಾಚೀನ ಸ್ಮಾರಕದ ವರೆಗಿನ ವಿಷಯಗಳು ಆವರಿಸಿಕೊಂಡಿದೆ. ಜಿ ಹಸಿರು ಬಣ್ಣದಿಂದ ಕೂಡಿದೆ. ಇದು ಗಾಲ್ಫ್ ಕೋರ್ಸ್ ಅನ್ನು ಪ್ರತಿನಿಧಿಸುತ್ತದೆ. ಎಲ್ ಯುನೆಸ್ಕೊದ ಜಾಗತಿಕ ಪಾರಂಪರಿಕ ನಿವೇಶನ ದಿಲ್ಲಿಯ ಖುತುಬ್ ಮಿನಾರ್ ಅನ್ನು ಪ್ರತಿನಿಧಿಸುತ್ತದೆ. ನಾಲ್ಕನೇ ಅಕ್ಷರ ಜಿ ಆನೆಯ ತಲೆ ಮಾದರಿಯಲ್ಲಿ ಇದೆ. ಇದರ ಕೆಳಗೆ ನವಿಲು ಇದೆ. ಇವೆರಡೂ ಭಾರತದ ಸಂಕೇತ. ಉಳಿದ ಅಕ್ಷರಗಳಾದ ಎರಡು ಒಗಳು ಹಾಗೂ ಇ ಭಾರತದ ಕರಕುಶಲ ಹಾಗೂ ಅಗೋಚರ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಈ ಅಕ್ಷರಗಳು ಒಟ್ಟಾಗಿ ಭಾರತದ ಬಗ್ಗೆ ಒಂದು ಪರಿಕಲ್ಪನೆಯನ್ನು ಕಟ್ಟಿ ಕೊಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News