ಮೂಡುಬೆಳ್ಳೆ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2019-01-26 16:59 GMT

ಶಿರ್ವ, ಜ.26: ಮೂಡುಬೆಳ್ಳೆ ಸಮೀಪದ ತಾಕಡಬೈಲ್ ಎಂಬಲ್ಲಿರುವ ಹಾಡಿಯಲ್ಲಿ ಜ.25ರಂದು ನಡೆದ ಆಂಡ್ರೋ ಮಾರ್ಟಿಸ್ (60) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಶಿರ್ವ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೆರ್ಣಂಕಿಲ ಗ್ರಾಮದ ಗುಂಡುಪಾದೆಯ ರಾಜೇಂದ್ರ ನಾಯಕ್ (47) ಹಾಗೂ ಮೂಡುಬೆಳ್ಳೆ ಚಕ್ರಬೆಟ್ಟುವಿನ ಸಂತೋಷ್ ಪೂಜಾರಿ (39) ಬಂಧಿತ ಆರೋಪಿಗಳು.

ಇವರಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂಡುಬೆಳ್ಳೆಯ ಎಡ್ಮೇರು ತಾಕಡಬೈಲು ಎಂಬಲ್ಲಿರುವ ಸಂತೋಷ್ ಶೆಟ್ಟಿ ಎಂಬವರ ಹಾಡಿಯಲ್ಲಿ ಆಂಡ್ರೋ ಮಾರ್ಟಿಸ್‌ರ ಮೃತದೇಹವು ಕೈಕಾಲು ಗಳನ್ನು ಬಟ್ಟೆಯಿಂದ ಕಟ್ಟಿ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಜ. 25ರಂದು ಮಧ್ಯಾಹ್ನ 12.45ರ ಸುಮಾರಿಗೆ ಪತ್ತೆಯಾಗಿತ್ತು. ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮೃತರ ಸಹೋದರಿ ಜೆಸ್ಸಿ ಸಲ್ದಾನ ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅದೇ ದಿನ ಬೆಳಗ್ಗೆ 9.45ರ ಸುಮಾರಿಗೆ ಆಂಡ್ರೋ ಮಾರ್ಟಿಸ್‌ರನ್ನು ಇಬ್ಬರು ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ಜೆಸ್ಸಿ ಸಲ್ದಾನ ನೋಡಿ ದ್ದರು. ಈ ಆಧಾರದಲ್ಲಿ ತನಿಖೆ ಕೈಗೆತ್ತಿಕೊಂಡ ಶಿರ್ವ ಪೊಲೀಸರು, ಆರೋಪಿ ಗಳಿಬ್ಬರನ್ನು ಜ.26ರಂದು ಬೆಳಗ್ಗೆ 7.30ರ ಸುಮಾರಿಗೆ ಮೂುಬೆಳ್ಳೆ ವೈನ್‌ಶಾಪ್ ಬಳಿ ಬಂಧಿಸಿದ್ದಾರೆ.

ಕೂಲಿ ಕಾರ್ಮಿಕರಾಗಿರುವ ಈ ಮೂವರು ಪರಸ್ಪರ ಪರಿಚಿತರಾಗಿದ್ದರು. ಆಂಡ್ರೋ ಮಾರ್ಟಿಸ್ ಕುಡಿತದ ಮತ್ತಿನಲ್ಲಿ ಆರೋಪಿಗಳಿಬ್ಬರಿಗೆ ಹಾಗೂ ಅವರ ತಂದೆತಾಯಿಗಳಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು. ವಾರದ ಹಿಂದೆ ಮೂಡುಬೆಳ್ಳೆ ವೈನ್‌ಶಾಪ್ ಬಳಿ ಈ ಮೂವರ ಮಧ್ಯೆ ಜಗಳ ನಡೆದಿತ್ತು. ಇದೇ ಕಾರಣದಿಂದ ಕುಪಿತಗೊಂಡ ಇವರಿಬ್ಬರು ಆಂಡ್ರೋ ಮಾರ್ಟಿಸ್‌ರನ್ನು ಪುಸಲಾಯಿಸಿ ತಮ್ಮ ಸ್ಕೂಟರ್‌ನಲ್ಲಿ ಹಾಡಿಗೆ ಕರೆದುಕೊಂಡು ಹೋಗಿ, ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿ ಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎಸ್ಪಿ ಲಕ್ಷ್ಮಣ್ ನಿಂಬರ್ಗಿ, ಹೆಚ್ಚು ವರಿ ಎಸ್ಪಿ ಕುಮಾರಚಂದ್ರ ಹಾಗೂ ಕಾರ್ಕಳ ಎಎಸ್ಪಿ ಪಿ.ಕೃಷ್ಣಕಾಂತ್ ಮಾರ್ಗ ದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಶಿರ್ವ ಠಾಣಾಧಿಕಾರಿ ಅಬ್ದುಲ್ ಖಾದರ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾ ಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News