×
Ad

ಮಂಗಳೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ನಾಪತ್ತೆ

Update: 2019-01-26 23:00 IST

ಮಂಗಳೂರು, ಜ.26: ನೀರುಮಾರ್ಗ ಸಮೀಪದ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿನಿ ಹಾಸ್ಟೆಲ್‌ನಿಂದ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.

ದಾವಣಗೆರೆ ಆಂಜನೇಯ ಬಡಾವಣೆ ನಿವಾಸಿ ಮೇಘನಾ (18) ನಾಪತ್ತೆಯಾದ ಯುವತಿ. ಇವರು ಜ.21ರಂದು ಸಂಜೆ ಕಾಲೇಜ್ ಹಾಸ್ಟೇಲ್‌ನಿಂದ ಹೋದವರು ಮರಳಿ ಬಾರದೆ, ಮನೆಗೂ ತೆರಳದೆ ನಾಪತ್ತೆಯಾಗಿರುತ್ತಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಹರೆ: 5.5ಅಡಿ, ಗೋಧಿ ಮೈಬಣ್ಣ, ಕನ್ನಡ, ಇಂಗ್ಲೀಷ್ ಮಾತನಾಡುತ್ತಿದ್ದು, ನೀಳಿ ಬಣ್ಣದ ಟಾಪ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಇವರ ಮಾಹಿತಿ ಸಿಕ್ಕವರು ಗ್ರಾಮಾಂತರ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ತಿಳಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News