×
Ad

ಫೇಸ್‌ಬುಕ್‌ನಲ್ಲಿ ಇಸ್ಲಾಂ, ಪ್ರವಾದಿ ನಿಂದನೆ: ದೂರು

Update: 2019-01-26 23:05 IST

ಮಂಗಳೂರು, ಜ.26: ಅಲ್ಲಾಹ್, ಪ್ರವಾದಿ ಮುಹಮ್ಮದ್, ಇಸ್ಲಾಮ್ ಧರ್ಮ ಮತ್ತು ಬ್ಯಾರಿ ಜನಾಂಗದ ಬಗ್ಗೆ ಅತ್ಯಂತ ಕೀಳುಮಟ್ಟದ ಪದ ಬಳಕೆ ಮಾಡಿ ತನ್ನ ಫೇಸ್‌ಬುಕ್‌ನಲ್ಲಿ ಅವಾಚ್ಯವಾಗಿ ನಿಂದಿಸಿದ ಆರೋಪಿ ವಿರುದ್ಧ ಮಂಗಳೂರು ನಗರ ದಕ್ಷಿಣ (ಪಾಂಡೇಶ್ವರ) ದೂರು ದಾಖಲಾಗಿದೆ.

ಮನೋಜ್ ಮನೋಹರ ಗೌಡ ಎಂಬಾತನ ವಿರುದ್ಧ ಬ್ಯಾರಿ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ರಹೀಂ ಉಚ್ಚಿಲ್ ದೂರು ದಾಖಲಿಸಿದ್ದಾರೆ.

ಆರೋಪಿ ತನ್ನ ಫೇಸ್‌ಬುಕ್ ಪುಟದಲ್ಲಿ ನಿಂದನಾತ್ಮಕ ಪೋಸ್ಟ್‌ನ್ನು ತೆಗೆದು ಹಾಕಿದ್ದು, ದಾಖಲೆ ಪರಿಶೀಲಿಸಿ ಎಫ್‌ಐಆರ್ ದಾಖಲಿಸುವ ಭರವಸೆಯನ್ನು ಉನ್ನತ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News