×
Ad

ಕನ್ನಂಗಾರು ‌: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ರಾಷ್ಟ್ರ ರಕ್ಷಣೆಗಾಗಿ ಮಾನವ ಸರಪಳಿ

Update: 2019-01-26 23:17 IST

ಕನ್ನಂಗಾರು, ಜ. 26 ‌: ಎಸ್ಕೆಎಸ್ಸೆಸ್ಸೆಫ್ ಸಮಿತಿಯು ಹಮ್ಮಿಕೊಂಡ ಗಣರಾಜ್ಯೋತ್ಸವ ಪ್ರಯುಕ್ತ ಮಾನವ ಸರಪಳಿ ಕಾರ್ಯಕ್ರಮ ಕನ್ನಂಗಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.

ಸಾರೇ ಜಹಾಂಸೆ ಆಲಾಪನೆಯೊಂದಿಗೆ ರಾಷ್ಟ್ರ ರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ಶಬ್ಬೀರ್ ಫೈಝಿ  ಬೋಧಿಸಿದರು. ಸಭೆಯ ಉದ್ಘಾಟನೆ ಮಾಡಿ ಮಾತನಾಡಿದ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಭಾರತ ಉಳಿಯಬೇಕಾದರೆ ಸ್ವಾಮೀಜಿಗಳು, ಉಲಮಾಗಳು, ಧರ್ಮಗುರುಗಳು, ಒಂದಾಗಿ ಕೈ ಜೋಡಿಸಬೇಕು. ಅದು ಕಾಲದ ಅನಿವಾರ್ಯ ಎಂದು ಅಭಿಪ್ರಾಯ ಪಟ್ಟರು. ಭಾರತದಲ್ಲಿ ಬಡತನ ಇರಬಹುದು ಆದರೆ ಅಪಘಾತ ದಲ್ಲಿ ದೇಹ ಎರಡು ತುಂಡಾಗಿ ಬಿದ್ದ ಸಮಯದಲ್ಲೂ  ತನ್ನೆರಡು ಕಣ್ಣನ್ನು ದಾನಮಾಡಲು ಭಾರತೀಯನಿಗೆ ಮಾತ್ರ ಸಾಧ್ಯ ಎಂದ ಅವರು ಮಕ್ಕಳ ಹಸಿವು ನೀಗದ ಹೊರತು ನನ್ನ ಸಾವಿನ ಸುದ್ದಿ ಮಕ್ಕಳಿಗೆ ಹೇಳಕೂಡದು ಎಂದ ಸಿದ್ಧಗಂಗಾ ಮಠ ಸ್ವಾಮಿಜಿ ಮತ್ತು ಅತ್ತಿಪಟ್ಟ ಉಸ್ತಾದರ ಬಗ್ಗೆ ಕಣ್ಣೀರು ಹಾಕಿದ ಕೋಮಲೆ ಎಂಬ ಹೆಂಗಸಿನ ಘಟನೆ ಬಗ್ಗೆ ವಿವರಿಸಿದರು.

ಪ್ರಾಸ್ತಾವಿಕ ಮಾತನ್ನಾಡಿದ ಮುಲ್ಕಿ ಖತೀಬ್ ಎಸ್ ಬಿ ದಾರಿಮಿ ಭಾರತೀಯತೆ ಯೆಂದರೆ ಪರಸ್ಪರ ಸಹಬಾಳ್ವೆ ಎಂದು ಸಭೆಗೆ ವಿವರಿಸಿದರು. ಸಂದೇಶ ಭಾಷಣ ಮಾಡಿದ ಕೇಮಾರು ಮಠದ ಈಶ ವಿಠ್ಠಲ ದಾಸ ಸ್ವಾಮೀಜಿಗಳು ದೇಶ ವನ್ನು ಕಟ್ಟಬೇಕಾದದ್ದು ಭೀತಿಯಿಂದಲ್ಲ ಪ್ರೀತಿ ಯಿಂದ ಎಂದು  ವಿವರಿಸಿ ರಾಷ್ಟ್ರ ಭಕ್ತಿ ಯ ಅನನ್ಯತೆಯನ್ನು ಕೊಂಡಾಡಿದರು. ನಂತರ ಮಾತನಾಡಿದ ಯಾಸರ್ ಅರಾಪತ್ ಕೌಸರಿಯು ರಾಷ್ಟ್ರ ವನ್ನು ಬಂದೂಕಿನ ಗುಂಡು ಮೂಲಕ ಕಟ್ಡಲಾಗದು ಅದನ್ನು ಪ್ರೀತಿ ವಿಶ್ವಾಸ ನಂಬಿಕೆಯಿಂದ,ಸೌಹಾರ್ದತೆಯಿಂದ ರಾಷ್ಟ್ರದ ರಕ್ಷಣೆಯನ್ನು ಮಾಡಬಹುದು ಎಂದು ನುಡಿದರು.

ಕಾಂಗ್ರೇಸ್ ನಾಯಕರಾದ ಎಂ ಎ  ಗಪೂರ್ ರವರು ರಾಷ್ಟ್ರೀಯತೆ ಪ್ರಾಮುಖ್ಯತೆ ಯನ್ನು ವಿವರಿಸಿ ಸೇವಾ ಮನೋಭಾವ ಬೆಳೆಸಬೇಕೆಂದರು. ಶೇಕರ್ ಹೆಜಮಾಡಿ ಶುಭಾಶಯ ಮಾತನ್ನಾಡಿ ಹಾರೈಸಿದರು. ಪಲಿಮಾರ್ ಮೊಯಿದಿನಬ್ಬ  ಸ್ವಾಗತಿಸಿದರು. ಬೊಳ್ಳೂರು ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು.
ಉಳ್ಳಾಲ ಪ್ರಾಂಶುಪಾಲರಾದ ಉಸ್ಮಾನುಲ್ ಫೈಝಿ, ಕೆ.ಪಿ. ಇಬ್ರಾಹಿಂ ಮಟಪಾಡಿ, ಮುಹಮ್ಮದ್ ಹನೀಫ್ ಹಾಜಿ ಬಂದರು, ಮೆಟ್ರೋ ಶಾಹುಲ್ ಹಮೀದ್ ಗುರುಪುರ, ಐ ಮೊಯಿದಿನಬ್ಬ ಹಾಜಿ ಮಂಗಳೂರು, ಇಕ್ಬಾಲ್ ಅಹ್ಮದ್ ಮುಲ್ಕಿ, ನೌಶಾದ್ ಹಾಜಿ ಸೂರಲ್ಪಾಡಿ, ಅಕ್ರಮ್ ಹಾಜಿ ಹ್ಯಾಂಡ್‌ ಪೋಸ್ಟ್ ಮೂಡಿಗೆರೆ, ಏ.ಕೆ .ಸುಲೇಮಾನ್  ಎರ್ಮಾಳ್, ಪಿ ಕೆ ಅಬೂ ಸಾಲಿಹ್ ಹಾಜಿ, ಶೇಕಬ್ಬ ಹಾಜಿ ಕೋಟೆ, ಇದ್ದಿನಬ್ಬ ಹಾಜಿ ಕೆಂತಕೆರೆ, ಸಿಯಾಲಿ ಹಾಜಿ ಕನ್ನಂಗಾರು, ಮೊಯಿದೀನ್ ಕುಟ್ಟಿ ಹಾಜಿ ಕನ್ನಂಗಾರು, ಎಚ್ ಸೂಫಿ ಅಹ್ಮದ್ ಹೆಜಮಾಡಿ, ಅಬ್ದುರ್ರಹ್ಮಾನ್ ದಾರಿಮಿ ಚೊಕ್ಕಬೆಟ್ಟು, ಉಸ್ಮಾನ್ ಅಬ್ದುಲ್ಲ ಸೂರಿಂಜೆ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದರು. 

ಹನೀಫ್ ದಾರಿಮಿ ಇಡ್ಯ ಮತ್ತು ಹೈದರ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News