×
Ad

ರಾಹುಲ್ ಗಾಂಧಿ ದುಬೈ ಭೇಟಿ, ಸಮಾವೇಶ ಯಶಸ್ವಿಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಡಾ. ಹಾರಿಸ್ ಕುಂಡಡ್ಕ

Update: 2019-01-26 23:38 IST

ಮಂಗಳೂರು, ಜ. 26: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದುಬೈ ಭೇಟಿ ಹಾಗೂ ಕಾಂಗ್ರೆಸ್ ಸಮಾವೇಶವನ್ನು ಯಶಸ್ವಿಗೊಳಿಸಲು ಬೆಳ್ತಂಗಡಿಯ ಅನಿವಾಸಿ ಭಾರತೀಯ ಡಾ. ಹಾರಿಸ್ ಕುಂಡಡ್ಕ ಮಹತ್ವದ ಪಾತ್ರಹಿಸಿದ್ದರು.

ಇತ್ತೀಚೆಗೆ ದುಬೈನಲ್ಲಿ ರಾಷ್ಟ್ರೀಯ ಕಾಂಗ್ರೆಸ್  ಪಕ್ಷದ 150ನೇ ಸಮಾವೇಶಕ್ಕೆ ಆಗಮಿಸಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ರಾಹುಲ್ ಗಾಂಧಿ ಅವರು ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಮಾತನಾಡಿದರು ಮತ್ತು ಇದರ ಹಿಂದೆ ಹಲವು ಅನಿವಾಸಿ ಭಾರತೀಯರ ಪರಿಶ್ರಮ ಇದ್ದರೂ ಸಹ ಡಾ. ಆರತಿಕೃಷ್ಣ ಜೊತೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅನಿವಾಸಿ ಭಾರತೀಯರಲ್ಲೊಬ್ಬರಾದ ಕನ್ನಡಿಗ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಮಾಜಿ ಮಂಡಲ ಪಂಚಾಯತ್  ಅಧ್ಯಕ್ಷರಾದ ದಿ. ಎ ಕೆ ಮುಹಮ್ಮದಾಲಿ ಅವರ ಪುತ್ರ ಡಾ. ಹಾರೀಸ್ ಕುಂಡಡ್ಕ ಪರಿಶ್ರಮ ಇದೆ.

ಡಾ. ಹಾರೀಸ್ ಕುಂಡಡ್ಕ ಅವರಿಗೆ ರಾಹುಲ್ ದುಬೈಗೆ ಭೇಟಿ ನೀಡುವ ಬಗ್ಗೆ ತಿಳಿದು ಅನಿವಾಸಿ ಭಾರತಿಯರಿಗೆ ಸಮಾವೇಶಕ್ಕೆ ಬರಲು ಉಚಿತ ಬಸ್ಸುಗಳ ವ್ಯವಸ್ಥೆ ಮತ್ತು ಜನರಿಗೆ ಸಂಜೆ ಉಪಹಾರ ವ್ಯವಸ್ಥೆ  ಮತ್ತು ಸ್ಟೇಡಿಯಮ್ ನಲ್ಲಿ ಶುಲ್ಕರಹಿತ ಆಗಮನಕ್ಕೆ ದಾರಿ ಮಾಡಿಕೊಡುವಲ್ಲಿ ಮುಖ್ಯಪಾತ್ರ ವಹಿಸಿದ್ದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ. ಹಾರಿಸ್ ಕುಂಡಡ್ಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ಕನ್ನಡವನ್ನೇ ಬಳಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News