ಭೋಪಾಲ ಅನಿಲ ದುರಂತ ಪ್ರಕರಣ: ಪರಿಹಾರ ಹೆಚ್ಚಿಸಲು ಕೋರಿದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
Update: 2019-01-28 20:00 IST
ಹೊಸದಿಲ್ಲಿ, ಜ.28: 1984ರ ಭೋಪಾಲ ಅನಿಲ ದುರಂತ ಪ್ರಕರಣದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು 7,844 ಕೋಟಿ ರೂ. ಹೆಚ್ಚುವರಿ ನಿಧಿಯನ್ನು ಯೂನಿಯನ್ ಕಾರ್ಬೈಡ್ ಸಂಸ್ಥೆಯಿಂದ ಪಡೆಯಲು ಬಯಸಿ ಕೇಂದ್ರ ಸರಕಾರ ಸಲ್ಲಿಸಿದ್ದ ಪರಿಹಾರಕ ಅರ್ಜಿ(ಕ್ಯುರೇಟಿವ್ ಪೆಟಿಶನ್)ಯ ವಿಚಾರಣೆಯನ್ನು ಎಪ್ರಿಲ್‌ನಲ್ಲಿ ನಡೆಸಲು ಸುಪ್ರೀಂಕೋರ್ಟ್‌ನ ಪೀಠ ನಿರ್ಧರಿಸಿದೆ.
ಅನಿಲ ದುರಂತದ ಸಂತ್ರಸ್ತರಿಗೆ 470 ಮಿಲಿಯನ್ ಡಾಲರ್ ಮೊತ್ತ ಪರಿಹಾರ ನೀಡುವುದೆಂದು ಈ ಹಿಂದೆ ನಿರ್ಧರಿಸಲಾಗಿತ್ತು. ಇದೀಗ 7,844 ಕೋಟಿ ರೂ. ಹೆಚ್ಚುವರಿ ಪರಿಹಾರ ನೀಡುವಂತೆ ಯೂನಿಯನ್ ಕಾರ್ಬೈಡ್ ಸಂಸ್ಥೆಗೆ ಸೂಚಿಸಬೇಕೆಂದು ಕೋರಿ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಯೂನಿಯನ್ ಕಾರ್ಬೈಡ್ ಸಂಸ್ಥೆಯ ಭೋಪಾಲ ಅನಿಲ ಸ್ಥಾವರದಲ್ಲಿ 1984ರ ಡಿ.2 ಮತ್ತು 3ರಂದು ನಡೆದಿದ್ದ ವಿಷಾನಿಲ ಸೋರಿಕೆ ದುರಂತದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.