ಇದುವರೆಗೆ ಎಷ್ಟು ದಲಿತರು, ಮುಸ್ಲಿಮರಿಗೆ ‘ಭಾರತ ರತ್ನ’ ನೀಡಿದ್ದೀರಿ: ಕೇಂದ್ರ ಸರಕಾರಕ್ಕೆ ಉವೈಸಿ ಪ್ರಶ್ನೆ

Update: 2019-01-28 14:32 GMT

ಹೊಸದಿಲ್ಲಿ, ಜ.28: ದೇಶದ ಅತ್ಯುನ್ನತ ಗೌರವವಾದ ‘ಭಾರತ್ ರತ್ನ’ ಪುರಸ್ಕಾರಕ್ಕೆ ನರೇಂದ್ರ ಮೋದಿ ಸರಕಾರದ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಎಐಎಂಐಎಂನ ಮುಖ್ಯಸ್ಥ ಅಸಾದುದ್ದೀನ್ ಉವೈಸಿ, ನಿರ್ದಿಷ್ಟ ಸಮುದಾಯವನ್ನು ಆಧರಿಸಿ ಈ ಆಯ್ಕೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಇದುವರೆಗೆ ಭಾರತ ರತ್ನ ಪ್ರಶಸ್ತಿ ಪಡೆದವರಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು, ಬಡವರು, ಮೇಲ್ವರ್ಗದವರು ಅಥವಾ ಬ್ರಾಹ್ಮಣರ ಸಂಖ್ಯೆ ಎಷ್ಟು ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದರು. ಅಂಬೇಡ್ಕರ್‌ಗೆ ಭಾರತರತ್ನ ಪುರಸ್ಕಾರ ನೀಡಲು ಮನಸ್ಸಿರಲಿಲ್ಲ, ಆದರೆ ನೀಡುವುದು ಅನಿವಾರ್ಯವಾಗಿತ್ತು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News