×
Ad

ಕೊರಿಯನ್ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಕಾರ್ಯಾಗಾರ

Update: 2019-01-28 20:24 IST

ಉಡುಪಿ, ಜ.28: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಪಂಚಕರ್ಮ ವಿಭಾಗದ ವತಿಯಿಂದ ಕೊರಿಯನ್ ಪ್ರತಿನಿಧಿಗಳಿಗೆ ಎರಡು ದಿನಗಳ ಅಂತಾರಾಷ್ಟ್ರೀಯ ಕಾರ್ಯಾ ಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಇದರಲ್ಲಿ ಸುಮಾರು 33 ಕೊರಿಯನ್ ಪ್ರತಿನಿಧಿಗಳು ಭಾಗವಹಿಸಿದ್ದರು. ವೊಂಕ್‌ವ್ಯಾಂಗ್ ಡಿಜಿಟಲ್ ವಿಶ್ವವಿದ್ಯಾಲಯ ಕೊರಿಯಾದ ಯೋಗ ಹಾಗೂ ಧ್ಯಾನ ವಿಭಾಗದ ವಿದ್ಯಾರ್ಥಿಗಳು ಬಾಗವಹಿಸಿದ್ದರು.

ಕಾರ್ಯಾಗಾರವನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ಉದ್ಘಾಟಿಸಿದರು. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ನಿರಂಜನ್ ರಾವ್, ಕೊರಿಯ ಯೋಗ ಮತ್ತು ಧ್ಯಾನ ವಿಭಾಗ ಮುಖ್ಯಸ್ಥ ಡಾ.ಜೋಂಗ್‌ಸೂಸ್ ಸಿಯೊ, ಭಾರತದ ಕಾರ್ಯಕ್ರಮ ಸಂಯೋಜಕ ಬನಾರಸ್ ಹಿಂದು ವಿವಿಯ ಡಾ.ಧರ್ಮೇಂದ್ರ ಕುಮಾರ ಮಿಶ್ರ, ದಕ್ಷಿಣ ಭಾರತದ ಕಾರ್ಯಕ್ರಮ ಸಂಯೋ ಜಕ ರಾಘವೇಂದ್ರ ಅಡಿಗ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಸ್ನಾತಕೋತ್ತರ ವಿಭಾಗದ ಸಹ ಮುಖ್ಯಸ್ಥ ಡಾ.ನಾಗರಾಜ್ ಎಸ್., ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ., ಸಹ ಪ್ರಾಧ್ಯಾಪಕಿ ಡಾ.ರಾಜಲಕ್ಷ್ಮಿ ಎಂ.ಜಿ. ಭಾಗವಹಿಸಿದ್ದರು. ಸಂಸ್ಥೆಯಲ್ಲಿ ನಡೆಯುತ್ತಿ ರುವ ವಿಶೇಷ ಚಿಕಿತ್ಸೆಗಳನ್ನು ಕೊರಿಯನ್ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕವಾಗಿ ತೋರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News