×
Ad

ಮೂಡುಬಿದಿರೆ: ಎಂ.ಸಿ.ಎಸ್. ಬ್ಯಾಂಕ್ ನಿರ್ದೇಶಕರ ಚುನಾವಣೆ

Update: 2019-01-28 21:03 IST

ಮೂಡುಬಿದಿರೆ, ಜ. 28: ಮುಂದಿನ 2019 ಎಪ್ರಿಲ್ ನಿಂದ 2024ರ ಮಾರ್ಚ್‍ವರೆಗಿನ 5 ಸಹಕಾರಿ ವರ್ಷಗಳ ಅವಧಿಗೆ ರವಿವಾರ ಬ್ಯಾಂಕಿನ ಆವರಣದಲ್ಲಿ ನಡೆದ ನಿರ್ದೇಶಕರುಗಳ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ , ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿಯವರ ಪಕ್ಷಾತೀತ ಬಳಗಕ್ಕೆ ಸಹಕಾರಿಗಳ ಬಹುಮತ ಲಭಿಸಿದೆ. ಈ ಬಾರಿ 11ರಿಂದ 13ಕ್ಕೇರಿದ್ದ ನಿರ್ದೇಶಕರುಗಳ ಸ್ಥಾನಗಳ ಪೈಕಿ ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಉಳಿದಂತೆ ಒಟ್ಟು 14 ಮಂದಿ ಉಮೇದುವಾರರಿದ್ದ ಉಳಿದ 10 ಸ್ಥಾನಗಳಿಗೆ ಚುನಾವಣೆ ನಡೆಯಿತು. ಒಟ್ಟು 7245 ಸಹಕಾರಿ ಮತಗಳ ಪೈಕಿ 3039 ಮತಗಳು ಚಲಾವಣೆಯಾಗಿವೆ.

ಫಲಿತಾಂಶ: 

7 ಸಾಮಾನ್ಯ ಸ್ಥಾನಗಳಿಗೆ 1. ಕೆ. ಅಮರನಾಥ ಶೆಟ್ಟಿ (2496 ಮತಗಳು), 2. ಎಂ.ಪಿ.ಅಶೋಕ್ ಕಾಮತ್ ( 2262), ಮನೋಜ್ ಕುಮಾರ್ ಶೆಟ್ಟಿ(2168), ಬಾಹುಬಲಿ ಪ್ರಸಾದ್ ಎಂ.(2063), ಎಂ.ಜ್ಞಾನೇಶ್ವರ ಕಾಳಿಂಗ ಪೈ (1938), ಅಬ್ದುಲ್ ಗಫೂರ್ ಸಿ.ಹೆಚ್ (1798), ಜಾರ್ಜ್ ಮೋನಿಸ್ (1797) ಆಯ್ಕೆಯಾಗಿದ್ದಾರೆ. ಸಹಕಾರ ಭಾರತಿ ಬೆಂಬಲಿತರಾಗಿದ್ದ ಟಿ.ರಘುವೀರ ಶೆಣೈ (1755) ಮತ್ತು ಪ್ರಸಾದ್ ಕುಮಾರ್(1356) ಪರಾಭವ ಗೊಂಡರು. ಈ ವಿಭಾಗದಲ್ಲಿ 164  ಅಸಿಂಧು ಮತಗಳಿದ್ದವು.

2 ಮಹಿಳಾ ಮೀಸಲು ಸ್ಥಾನಗಳಿಗೆ 1. ಪ್ರೇಮಾ ಎಸ್. ಸಾಲ್ಯಾನ್ (2080) 2. ಅನಿತಾ ಶೆಟ್ಟಿ (1805) ಆಯ್ಕೆಯಾಗಿದ್ದು ಸಹಕಾರ ಭಾರತಿ ಬೆಂಬಲಿತರಾಗಿದ್ದ ಯಶೋಧಾ ಎಸ್. ಸಾಲ್ಯಾನ್ (1039) ಪರಾಭವಗೊಂಡರು. ಇಲ್ಲಿ 332 ಅಸಿಂಧು ಮತಗಳಿದ್ದವು.

1 ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಎಂ.ಪದ್ಮನಾಭ (1786) ಆಯ್ಕೆಯಾದರೆ ಸ್ವತಂತ್ರ ಅಭ್ಯರ್ಥಿಯಾಗಿದ್ದ ಕೊರಗಪ್ಪ (1036) ಪರಾಭವ ಕಂಡರು. ಇಲ್ಲಿ 452 ಅಸಿಂಧು ಮತಗಳಿದ್ದವು.

ಪ.ಪಂಗಡಕ್ಕೆ ಮೀಸಲಾದ 1 ಸ್ಥಾನಕ್ಕೆ ದಯಾನಂದ ನಾಯ್ಕ , ಹಿಂದುಳಿದ ವರ್ಗ  ಪ್ರವರ್ಗ-ಎ ಮೀಸಲಾದ 2 ಸ್ಥಾನಕ್ಕೆ ಗಣೇಶ್ ನಾಯಕ್ ಮತ್ತು ಜಯರಾಮ ಕೋಟ್ಯಾನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ನೂತನ ಆಯ್ಕೆಯಲ್ಲಿ ಹೆಚ್ಚಳವಾದ 2 ಸ್ಥಾನಗಳೂ ಸೇರಿದಂತೆ ಒಟ್ಟು ನಾಲ್ಕು ಹೊಸ ಮುಖಗಳಿವೆ.

ಅಭಿನಂದನೆ: ರವಿವಾರ ರಾತ್ರಿ 8.30ರ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆಯುತ್ತಿದ್ದಂತೆ ಚುನಾವಣಾಧಿಕಾರಿ, ಸಹಕಾರಿ ಉಪನಿಬಂಧಕರ ಕಛೇರಿಯ ವಿಲಾಸ್ ವಿವರಗಳನ್ನು ಅಧಿಕೃತವಾಗಿ ಘೋಷಿಸಿದರು. ಬಳಿಕ ಆಯ್ಕೆಯಾದ ನಿರ್ದೇಶಕರುಗಳು ಕೆ. ಅಮರನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿದ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ. ಅಮರನಾಥ ಶೆಟ್ಟಿಯವರು ಬ್ಯಾಂಕಿನಿಂದ ದೊರೆತಿರುವ ಉತ್ತಮ ಸೇವೆಯಿಂದಾಗಿ ಜನತೆ ಮತ್ತೆ ನಮ್ಮನ್ನು ವಿಶ್ವಾಸದಿಂದ ಆರಿಸಿದೆ. ಅವರ ಪ್ರೀತಿ, ವಿಶ್ವಾಸ, ಆಶಯದಂತೆ ಸಂಸ್ಥೆ ಮುನ್ನಡೆಯಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಚಂದ್ರಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News