ಅವೈಜ್ಞಾನಿಕ ಮೀನುಗಾರಿಕೆ ನಿಷೇಧ ಆದೇಶ ಜಾರಿಗೆ ಆಗ್ರಹಿಸಿ ಮನವಿ
Update: 2019-01-28 22:03 IST
ಉಡುಪಿ, ಜ.28: ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಷೇಧಿಸಿ ರಾಜ್ಯ ಮತ್ತು ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ಪಾಲನೆ ಮಾಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಮೀನುಗಾರರು ಇಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಾಶ್ವನಾರ್ಥ ಅವರಿಗೆ ಮನವಿ ಸಲ್ಲಿಸಿದ್ದಾರೆ.
2017ರ ಮಾ.25 ರಂದು ರಾಜ್ಯ ಸರಕಾರ ಹಾಗೂ ನ.10ರಂದು ಕೇಂದ್ರ ಸರಕಾರ ಲೈಟ್ ಆಧಾರಿತ ಪರ್ಶಿನ್ ಮೀನುಗಾರಿಕೆ ಹಾಗೂ ಅವೈಜ್ಞಾನಿಕ ಮೀನುಗಾರಿಕೆ ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ ಜಿಲ್ಲೆ ಯಲ್ಲಿ ಈ ಆದೇಶ ಇನ್ನೂ ಪಾಲನೆಯಾಗುತ್ತಿಲ್ಲ. ಆದುದರಿಂದ ಉಡುಪಿ ಜಿಲ್ಲಾ ವ್ಯಾಪ್ತಿಯ ಗಂಗೊಳ್ಳಿ ಹಾಗೂ ಮಲ್ಪೆ ಬಂದರಿನಲ್ಲಿ ಬೆಳಕು ಕೇಂದ್ರಿತ ಮೀನು ಗಾರಿಕೆಯನ್ನು ಕೂಡಲೇ ನಿಷೇಧಬೇಕು. ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಮನವಿಯಲ್ಲಿ ಒತ್ತಾಯಿಸ ಲಾಗಿದೆ.