ವಿಪರೀತ ಕೆಮ್ಮು: ಗರ್ಭಿಣಿ ಮೃತ್ಯು
Update: 2019-01-28 22:12 IST
ಕುಂದಾಪುರ, ಜ.28: ವಿಪರೀತ ಕೆಮ್ಮಿನಿಂದ ಗರ್ಭಿಣಿ ಮಹಿಳೆಯೊಬ್ಬರು ಇಂದು ಬೆಳಗ್ಗೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಮಮತಾ ಬಿಲ್ಲವ(32) ಎಂದು ಗುರುತಿಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಇವರು 9 ತಿಂಗಳ ಹಿಂದೆ ಮೋಹನ ಎಂಬವರನ್ನು ಮದುವೆಯಾಗಿದ್ದು, ಈ ಎಂಟು ತಿಂಗಳ ಗರ್ಭಿಣಿ ಯಾಗಿದ್ದರು.
ಸುಮಾರು ಒಂದುವರೆ ತಿಂಗಳ ಹಿಂದೆ ತವರು ಮನೆ ಬಂದಿದ್ದ ಇವರಿಗೆ ಇಂದು ಬೆಳಗ್ಗೆ ವಿಪರೀತ ಕೆಮ್ಮ ಆರಂಭಗೊಂಡಿತ್ತೆನ್ನಲಾಗಿದೆ. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮಮತಾ ಬಿಲ್ಲವ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.