ವೀಣಾ ಬನ್ನಂಜೆಗೆ ತಿಂಗಳೆ ಪ್ರಶಸ್ತಿ
Update: 2019-01-28 22:17 IST
ಉಡುಪಿ, ಜ.28: ಖ್ಯಾತ ಸಾಹಿತಿ, ಚಿಂತಕಿ ಹಾಗೂ ಆಧ್ಯಾತ್ಮ ಸಾಧಕಿ ಡಾ. ವೀಣಾ ಬನ್ನಂಜೆ 2019ನೇ ಸಾಲಿನ ತಿಂಗಳೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿವಿಧ ರಂಗಗಳಲ್ಲಿ ಶ್ರೇಷ್ಠ ಸಾಧನೆಗಾಗಿ ತಿಂಗಳೆ ಪ್ರತಿಷ್ಠಾನದಿಂದ ನೀಡಲಾಗುವ ತಿಂಗಳೆ ಪ್ರಶಸ್ತಿಗೆ ಖ್ಯಾತ ಸಂಸ್ಕೃತ ವಿದ್ವಾಂಸರೂ, ಚಿಂತಕರೂ ಆದ ಬನ್ನಂಜೆ ಗೋವಿಂದಾಚಾರ್ಯ ಅವರ ಪುತ್ರಿ ವೀಣಾ ಬನ್ನಂಜೆ ಅವರನ್ನು ತಿಂಗಳೆ ಪ್ರಶಸ್ತಿಯ ಆಯ್ಕೆ ಸಮಿತಿ ಆಯ್ಕೆ ಮಾಡಿದೆ.
ಮುಂದಿನ ಮಾ.8ರಂದು ತಿಂಗಳೆಯಲ್ಲಿ ಜರಗಲಿರುವ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ.