×
Ad

ಗುಡ್ಡೆಯಂಗಡಿ ರಸ್ತೆಗೆ ವೈಜ್ಞಾನಿಕ ಹಂಪ್ಸ್ ನಿರ್ಮಾಣ

Update: 2019-01-28 22:44 IST

ಬಂಟ್ವಾಳ, ಜ. 28: ಸಾರ್ವಜನಿಕರ ಸುರಕ್ಷತೆ, ಅಪಘಾತ ತಡೆ ದೃಷ್ಠಿಯಿಂದ ರಾಜ್ಯ ಹೆದ್ದಾರಿಯ ಮೆಲ್ಕಾರ್ ಸಮೀಪದ ಗುಡ್ಡೆಯಂಗಡಿ ರಸ್ತೆಗೆ ವೈಜ್ಞಾನಿಕ ಹಂಪ್ಸ್ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರ ಸಹಕಾರದೊಂದಿಗೆ ಇಲ್ಲಿನ ರಸ್ತೆಗೆ ಹಂಪ್ಸ್‍ಗಳನ್ನು ಹಾಕಲಾಯಿತು.

ಮೆಲ್ಕಾರ್ ಸಮೀಪದ ಗುಡ್ಡೆಯಂಗಡಿ ರಸ್ತೆಗೆ ವೈಜ್ಞಾನಿಕ ಹಂಪ್ಸ್ ನಿರ್ಮಿಸುವಂತೆ ಒತ್ತಾಯಿಸಿ ಜ.24ರಂದು ಸ್ಥಳೀಯರು ರಸ್ತೆ ತಡೆದು ಧರಣಿ ನಡೆಸಿದ್ದು, ಪುರಸಭಾ ಸದಸ್ಯ ಹಾಗೂ ಸ್ಥಳೀಯರ ಒತ್ತಾಯಕ್ಕೆ ಮಣಿದ ಪಿಡಬ್ಲ್ಯೂಡಿ ವೈಜ್ಞಾನಿಕ ಹಂಪ್ಸ್ ನಿರ್ಮಿಸಿದೆ.

ಈ ಸಂದರ್ಭದಲ್ಲಿ ಸ್ಥಳೀಯ ಪುರಸಭಾ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ, ಪಿಡಬ್ಲ್ಯೂಡಿ ಇಂಜಿನೀಯರ್ ರವೀಂದ್ರ ಶೆಟ್ಟಿ, ನಗರ ಠಾಣಾ ಎಸ್ಸೈ ಚಂದ್ರಶೇಖರ್ ಹಾಜರಿದ್ದು, ಕಾಮಗಾರಿಯನ್ನು ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News