×
Ad

ಅಫ್ಘಾನ್ ಸರಕಾರದ ಜೊತೆ ಶಾಂತಿ ಮಾತುಕತೆ ನಡೆಸಲು ತಾಲಿಬಾನ್‌ಗೆ ಘನಿ ಕರೆ

Update: 2019-01-28 22:54 IST

ಕಾಬೂಲ್,ಜ.28: ದೇಶದಲ್ಲಿ ಶಾಂತಿ ಸ್ಥಾಪನೆಗಾಗಿ ಅಫ್ಘಾನ್ ಸರಕಾರದ ಜೊತೆ ಗಂಭೀರವಾದ ಮಾತುಕತೆಯಲ್ಲಿ ತೊಡಗುವಂತೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಸೋಮವಾರ ತಾಲಿಬಾನ್ ಬಂಡುಕೋರರಿಗೆ ಕರೆ ನೀಡಿದ್ದಾರೆ.

ಅಮೆರಿಕ ಹಾಗೂ ತಾಲಿಬಾನ್ ಪ್ರತಿನಿಧಿಗಳ ನಡುವೆ ಕಳೆದ ವಾರ ಕತರ್‌ನಲ್ಲಿ ಶಾಂತಿಮಾತುಕತೆಗಳು ಪೂರ್ಣಗೊಂಡ ಬೆನ್ನಲ್ಲೇ ಅಶ್ರಫ್ ಘನಿ ಬಂಡುಕೋರರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ.

ಕಾಬೂಲ್‌ನಲ್ಲಿ ಸೋಮವಾರ ಅಧ್ಯಕ್ಷೀಯ ಅರಮನೆಯಲ್ಲಿ, ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಘನಿ ಅವರು, ‘‘ ಶಾಂತಿಗಾಗಿ ಅಫ್ಘಾನ್ನ ಜನತೆಯ ಬೇಡಿಕೆಯನ್ನು ಸ್ವೀಕರಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕೆಂದು ನಾನು ತಾಲಿಬಾನ್‌ಗೆ ಕರೆ ನೀಡುತ್ತೇನೆ’’ ಎಂದವರು ಹೇಳಿದರು.

ಅಮೆರಿಕ ಹಾಗೂ ತಾಲಿಬಾನ್ ಪ್ರತಿನಿಗಳ ಮಧ್ಯೆ ಕತರ್‌ನಲ್ಲಿ ನಡೆದ ಮಾತುಕತೆಯಲ್ಲಿ ತಮ್ಮನ್ನು ಹೊರಗಿಟ್ಟಿರುವ ಬಗ್ಗೆ ಅ್ಘಾನ್ ಅಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅಮೆರಿಕಾ ಹಾಗೂ ತಾಲಿಬಾನ್ ನಡುವೆ ಏರ್ಪಡುವ ಯಾವುದೇ ಒಡಂಬಡಿಕೆಗೂ, ಅಪ್ಘಾನ್ ಸರಕಾರದ ಅನುಮೋದನೆಯ ಅಗತ್ಯವಿದೆಯೆಂದು ಅವರು ಅಭಿಪ್ರಾಯಿಸಿದ್ದರು. ಆದರೆ ತಾಲಿಬಾನ್ ಅಬ್ದುಲ್ ಘನಿ ನೇತೃತ್ವದ ಸರಕಾರವು ಒಂದು ‘ ಕೈಗೊಂಬೆ ಸರಕಾರ’ವಾಗಿದ್ದು, ಅದರ ಜೊತೆ ಮಾತುಕತೆ ನಡೆಸುವುದಿಲ್ಲವೆಂದು ತಾಲಿಬಾನ್ ಪಟ್ಟು ಹಿಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News