ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾಗಿ ಸಯ್ಯದ್ ಉಮ್ಮರ್ ಅಸ್ಸಖಾಫ್ ತಂಙಳ್ ಮನ್ಶರ್ ಆಯ್ಕೆ
ಬೆಂಗಳೂರು, ಜ. 28: ಎಸ್ಸೆಸ್ಸೆಪ್ ಕರ್ನಾಟಕ ರಾಜ್ಯ ಸಮಿತಿಯಿಂದ ವಾರ್ಷಿಕ ಕೌನ್ಸಿಲ್ ನ ಪ್ರಯುಕ್ತ ಉಂದುಲುಸ್ ರಾಜ್ಯ ಪ್ರತಿನಿಧಿ ಸಮಾವೇಶದವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಪಿ ಕೊಡಗು ಅಧ್ಯಕ್ಷತೆಯಲ್ಲಿ ಬೆಂಗಳೂರಿನ್ ಖುದ್ದೂಸ್ ಈದ್ಗಾ ಮೈದಾನದಲ್ಲಿ ನಡೆಯಿತು.
ಬದ್ರುಸ್ಸದಾತ್ ಇಬ್ರಾಹಿಂ ಖಲೀಲ್ ಅಲ್-ಬುಖಾರಿ ತಂಙಲ್ ಕಡಲುಂಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಅಧ್ಯಕ್ಷ ತಾಜುಲ್ ಪುಖಹಾಹ್ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಅಲ್-ಮದೀನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್, ಡಾ ಹಕೀಂ ಅಝ್ಹರಿ, ಡಾ ಫಾರೂಕ್ ನಯೀಮಿ, ಇಸ್ಮಾಯಿಲ್ ವಫಾ ಸರ್ ತರಗತಿಗಳನ್ನು ನಡೆಸಿದರು.
ಅಖಿಲ ಭಾರತ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರ ಮುಖ್ಯ ಪ್ರಭಾಷಣದ ನಂತರ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ನೂತನ ಸಮಿತಿನ್ನು ಸುಲ್ತಾನುಲ್ ಉಲಮಾ ಉಸ್ತಾದರು ಘೋಷಣೆ ಮಾಡಿದರು.
ರಾಜ್ಯಾಧ್ಯಕ್ಷರಾಗಿ ಸಯ್ಯದ್ ಉಮ್ಮರ್ ಅಸ್ಸಖಾಫ್ ತಂಙಳ್ ಮನ್ಶರ್ ಗೇರುಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಯಾಕೂಬ್ ಮಾಸ್ಟರ್ ಕೊಳಕೇರಿ, ಕೋಶಾಧಿಕಾರಿಯಾಗಿ ರವೂಫ್ ಖಾನ್ ಕುಂದಾಪುರ, ಉಪಾಧ್ಯಕ್ಷರಾಗಿ ಮೌಲಾನಾ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ, ಡೆಪ್ಯುಟಿ ಅಧ್ಯಕ್ಷರಾಗಿ ಗುಲಾಂ ಹುಸೈನ್ ನೂರಿ ಗಂಗಾವತಿ, ಕಾರ್ಯದರ್ಶಿಗಳಾಗಿ ಶರೀಫ್ ಮಾಸ್ಟರ್ ಬೆಂಗಳೂರು, ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಕೆ.ಎಂ.ಮುಸ್ತಫಾ ನಯೀಮಿ ಹಾವೇರಿ, ಹುಸೈನ್ ಸಅದಿ ಹೊಸ್ಮಾರ್ , ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ, ಹಾಫಿಳ್ ಯಾಕೂಬ್ ಸ ಅದಿ ನಾವೂರು, ನವಾಝ್ ಭಟ್ಕಳ, ಕರ್ನಾಟಕ ಈಸ್ಟ್ ರೀಜಿಯನ್ ಸಂಚಾಲಕರಾಗಿ ಹುಸೈನ್ ಅಶ್ರಫಿ ಮಿಸ್ಬಾಯಿ ಬೆಂಗಳೂರು, ಮಿಡ್ಲ್ ರೀಜಿಯನ್ ಸಂಚಾಲಕರಾಗಿ ಹಾಫಿಳ್ ಆದಂ ರಝ್ವಿ ಚಿತ್ರದುರ್ಗ, ನಾರ್ತ್ ರೀಜಿಯನ್ ಸಂಚಾಲಕರಾಗಿ ನೂರುದ್ದೀನ್ ರಝ್ವಿ ಗಂಗಾವತಿ ಅಯ್ಕೆಯಾದರು.
ಎಸ್ಸೆಸ್ಸೆಪ್ ಸುಪ್ರಿಮ್ ಕೌನ್ಸಿಲ್ ಚಯರ್ ಮ್ಯಾನ್ ಎಮ್.ಎಸ್ಎಮ್ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ವಾರ್ಷಿಕ ಕೌನ್ಸಿಲ್ ನಲ್ಲಿ ಎಸ್ಸೆಸ್ಸೆಫ್ ಸುಪ್ರಿಂ ಕೌನ್ಸಿಲ್ ಕನ್ವೀನರ್ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಸದಸ್ಯರುಗಳಾದ ಎಸ್.ಪಿ ಹಂಝ ಸಖಾಫಿ ಬಂಟ್ವಾಳ,ಜಿ.ಎಂ.ಮಹಮ್ಮದ್ ಕಾಮಿಲ್ ಸಖಾಫಿ, ಶಾಪಿ ಸಅದಿ ಬೆಂಗಳೂರು, ಅಬ್ದುಲ್ ಹಮೀದ್ ಬಜ್ಪೆ, ಯಾಕೂಬ್ ಯೂಸುಫ್ ಹೊಸನಗರ, ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಚುನಾವಣಾ ಪ್ರಕ್ರಿಯೆಗಳಿಗೆ ಸಾಥ್ ನೀಡಿದರು.
ಎಸ್ಸೆಸ್ಸೆಫ್ ರಾಜ್ಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಸ್ವಾಗತಿಸಿದರು. ರಾಜ್ಯ ನೂತನ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ವಂದಿಸಿದರು.