ಬ್ಯಾರಿ ಮೇಳದ ಅಂಗವಾಗಿ ‘ಬ್ಯಾರೀಸ್ ಗಾಟ್ ಟ್ಯಾಲೆಂಟ್’ ಪ್ರತಿಭಾ ಪ್ರದರ್ಶನ
ಮಂಗಳೂರು, ಜ. 28: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ವತಿಯಿಂದ ಫೆ. 8, 9 ಮತ್ತು 10 ರಂದು ಮಂಗಳೂರು ಪುರಭವನದಲ್ಲಿ ಬ್ಯಾರಿ ಮೇಳ ನಡೆಯಲಿದೆ.
ಇದರ ಅಂಗವಾಗಿ ಮುಸ್ಲಿಂ ಸಮುದಾಯದ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲು ವೇದಿಕೆಯನ್ನು ಕಲ್ಪಿಸುವ ಸಲುವಾಗಿ ‘ಬ್ಯಾರೀಸ್ ಗಾಟ್ ಟ್ಯಾಲೆಂಟ್’ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸುತ್ತಿದೆ.
ಫೆ. 9 ರಂದು ಸಂಜೆ ಗಂಟೆ 4.30 ರಿಂದ 7 ರತನಕ ನಡೆಯುವ ಸದರಿ ಕಾರ್ಯಕ್ರಮದಲ್ಲಿ ಪ್ರತೀ ಸ್ಪರ್ಧಿಗೆ ಗರಿಷ್ಠ 5 ನಿಮಿಷಗಳ ಅವಧಿಯನ್ನು ನೀಡಲಾಗು ವುದು. ಪ್ರಥಮ ಬಹುಮಾನ 5000 ರೂ., ದ್ವಿತೀಯ ಬಹುಮಾನ 4000 ರೂ. ಮತ್ತು ತೃತೀಯ ಬಹುಮಾನ 3000 ರೂ. ನೀಡಲಾಗುತ್ತದೆ.
ಮುಸ್ಲಿಂ ಸಮುದಾಯದ ಪ್ರತಿಭೆಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತೆ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಹಾಜಿ ಎಸ್.ಎಂ ರಶೀದ್ ಮತ್ತು ಬ್ಯಾರಿ ಮೇಳದ ಸಂಚಾಲಕ ಮನ್ಸೂರ್ ಅಹ್ಮದ್ ಆಝಾದ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 0824-4262323, 9535563897 ಸಂಪರ್ಕಿಸಬಹುದು.