ಮತ್ಸ ಸಂಪನ್ಮೂಲ ಸಂರಕ್ಷಣೆ ಅಗತ್ಯ: ಡಾ.ಪ್ರವೀಣ್ ಪುತ್ರ
ಮಂಗಳೂರು, ಜ.28: ಕಡಲ ಮೀನುಗಾರಿಕೆ ಮಾಡುವಾಗ ಜವಾಬ್ದಾರಿ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮೀನಿನ ಸಂಪನ್ಮೂಲವನ್ನು ಸಂರಕ್ಷಿಸುವುದು ಪ್ರಾಮುಖ್ಯವಾದುದು ಎಂದು ನವದೆಹಲಿಯ ಭಾರತೀಯ ಕೃಷಿ ಸಂಶೋದನಾ ಪರಿಷತ್‌ನ ಸಹಾಯಕ ಮಹಾ ನಿರ್ದೇಶಕ (ಮೀನುಗಾರಿಕೆ) ಡಾ. ಪ್ರವೀಣ್ ಪುತ್ರ ಹೇಳಿದರು.
ಮೀನುಗಾರಿಕಾ ಕಾಲೇಜು, ಮಂಗಳೂರು ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಆಡಳಿತ ಸಂಸ್ಥೆಯ ಸಹಯೋಗದಿಂದ ಎರಡು ದಿನಗಳ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಎಚ್.ಶಿವಾನಂದ ಮೂರ್ತಿ ಮಾತನಾಡಿ, ಮೀನುಗಾರಿಕೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸ ಮಾಡುತ್ತಿರುವವರಿಗೆ ಅನುಕೂಲವಾಗುತ್ತದೆ. ಮತ್ಸ್ಯ ಸಂರಕ್ಷಣೆ ಮಾಡುವಲ್ಲಿ ಜಾಗರೂಕತೆಯಿಂದ ಪಾಲಿಸಬೇಕಾದ ನೀತಿ ನಿಯಮಗಳು ಅತೀ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೇರಳದ ಮೀನುಗಾರಿಕೆ ಮತ್ತು ಸಾಗರ ಶಾಸ್ತ್ರ ಅಧ್ಯಯನದ ವಿಶ್ವವಿದ್ಯಾನಿಲಯ ಮತ್ತು ಉತ್ತರಪ್ರದೇಶದ ವೆಂಕಟೇಶ್ವರ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಮಧುಸೂದನ ಕುರುಪ್ ಉಪನ್ಯಾಸ ನೀಡಿದರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಆಡಳಿತ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಎಂ.ರಮೇಶ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೌಂದರ್ಯ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಯೋಜಕ ಮತ್ತು ಮತ್ಸ್ಯ ಸಂಪನ್ಮೂಲ ನಿರ್ವಹಣೆ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ. ಎಸ್.ಎಂ. ಶಿವಪ್ರಕಾಶ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಮೃದುಲಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.