ಮರಳು ತೆಗೆಯುವ ಪರವಾನಿಗೆ ನೀಡುವ ಅಧಿಕಾರ ಆಯ್ದ ಗ್ರಾ.ಪಂ.ಗೆ : ದ.ಕ.ಜಿ.ಪಂ.ಸಭೆ
ಮಂಗಳೂರು, ಜ.30: ಮರಳು ತೆಗೆಯುವ ಅನಮತಿ ನೀಡುವ ಅಧಿಕಾರ ಆಯ್ದ 8 ಗ್ರಾಮ ಪಂಚಾಯತ್ ಗೆ ನೀಡಲು ಒಂದು ವಾರದೊಳಗೆ ನಿಯಮಾ ವಳಿ ರೂಪಿಸಲಾಗುವುದು ಎಂದು ದಕ್ಷಿಣ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿನ ಸಭೆಯಲ್ಲಿಂದು ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್. ಸೆಲ್ವಮಣಿ ತಿಳಿಸಿದ್ದಾರೆ.
ಮರಳು ತೆಗೆಯಲು ಅನುಮತಿ ನೀಡುವ ಬಗ್ಗೆ ಕೆಲವು ನಿಯಮಾವಳಿಗಳನ್ನು ರೂಪಿಸಿ ಪ್ರಥಮ ಹಂತದಲ್ಲಿ ಸಿಆರ್ ಝೆಡ್ ವ್ಯಾಪ್ತಿಯಿಂದ ಹೊರತಾದ ನದಿ, ಹೊಳೆ ತೀರದ 8 ಗ್ರಾಮ ಪಂಚಾಯತಿಗಳಿಗೆ ಅಧಿಕಾರ ನೀಡಲಾಗುವುದು ಎಂದು ಸೆಲ್ವಮಣಿ ತಿಳಿಸಿದರು.
ಶುದ್ಧ ಕುಡಿಯುವ ನೀರು ಪೂರೈಸಲು ವಿವಿಧ ಕಡೆಗಳಲ್ಲಿ ಅಳವಡಿಸಲಾದ ಘಟಕಗಳು ಪದೇ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಬಗ್ಗೆ ತನಿಖೆ ನಡೆಸಲು ಎನ್ಐಟಿಕೆಯ ತಜ್ಞ ರ ತಂಡದ ಸಲಹೆ ಪಡೆಯುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿನ ಮಾಹಿತಿ ಗಳನ್ನೊಳಗೊಂಡ ವೆಬ್ ಸೈಟ್ ನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಚಾಲನೆ ನೀಡಿದರು.
ಸಭೆಯಲ್ಲಿ ಸರಕಾರದ ಸಂಸದೀಯ ಕಾರ್ಯದರ್ಶಿ ಐವನ್ ಡಿ ಸೋಜ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅನಿತಾ ಹೇಮನಾಥ ಶೆಟ್ಟಿ,ಯು. ಪಿ. ಇಬ್ರಾಹಿಂ, ಜನಾರ್ದನ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ಸೆಲ್ವಮಣಿ ಮೊದಲಾದ ವರು ಉಪಸ್ಥಿತರಿದ್ದರು.