ನಮ್ಮೊಳಗಿನ ಗಾಂಧೀಜಿಯನ್ನು ಬಡಿದೆಬ್ಬಿಸಿ: ಡಾ.ಮುರಲಿ ಮೋಹನ ಚೂಂತಾರು
Update: 2019-01-30 20:16 IST
ಮಂಗಳೂರು, ಜ.30: ನಗರದ ಮೇರಿಹಿಲ್‌ನಲ್ಲಿರುವ ದ.ಕ. ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಬುಧವಾರ ಹುತಾತ್ಮರ ದಿನ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಜಿಲ್ಲಾ ಸಮಾದೇಷ್ಠ ಡಾ.ಮುರಲಿ ಮೋಹನ ಚೂಂತಾರು ‘ಪ್ರತಿಯೊಬ್ಬರ ಮನದೊಳಗೆ ಗಾಂಧೀಜಿಯ ಆದರ್ಶಗಳು ಸುಪ್ತವಾಗಿದೆ. ಹಾಗಾಗಿ ನಮ್ಮೊಳಗಿನ ಗಾಂಧೀಜಿಯನ್ನು ಬಡಿದೆಬ್ಬಿಸುವ ಕಾರ್ಯ ತುರ್ತಾಗಿ ಆಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಅಧೀಕ್ಷಕ ಎ. ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ದಲಾಯತ್ ಮೀನಾಕ್ಷಿ ಹಾಗೂ ಮಂಗಳೂರು ಘಟಕಾಧಿಕಾರಿ ಮಾರ್ಕ್‌ಶೇರ್ ಮತ್ತು ಸನತ್, ಸುನೀಲ್, ರಮೇಶ್ ಭಂಡಾರಿ, ದಿವಾಕರ, ಮಹೇಶ್, ಹರಿಪ್ರಸಾದ್ ಉಪಸ್ಥಿತರಿದ್ದರು.