ಅಂತಾರಾಷ್ಟ್ರೀಯ ನಾಟಕೋತ್ಸವಕ್ಕೆ ‘ವಿ ಟೀಚ್ ಲೈಫ್..ಸರ್’ ನಾಟಕ ಆಯ್ಕೆ
ಉಡುಪಿ, ಜ.30: ಸಂಗಮ ಕಲಾವಿದೆರ್ ಮಣಿಪಾಲ ತಂಡದ ವಿ ಟೀಚ್ ಲೈಫ್..ಸರ್!! ನಾಟಕವು ದೆಹಲಿಯಲ್ಲಿ ನಡೆಯುವ 20 ದಿನಗಳ 20ನೇ ಅಂತಾರಾಷ್ಟ್ರೀಯ ನಾಟಕೋತ್ಸವ ಭಾರತ್ ರಂಗ್ ಮಹೋತ್ಸವಕ್ಕೆ ಆಯ್ಕೆ ಯಾಗಿದೆ ಎಂದು ತಂಡದ ಅಧ್ಯಕ್ಷ ಶ್ರೀಪತಿ ಪೆರಂಪಳ್ಳಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಾಟಕೋತ್ಸವವು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ವತಿಯಿಂದ ನಡೆಯ ಲಿದೆ. ಫೆ.3ರಂದು ಸಂಜೆ 5:30ಕ್ಕೆ ದೆಹಲಿಯ ಆಡಿಟೋರಿಯಂನಲ್ಲಿ ಪ್ರಶಾಂತ್ ನಿರ್ದೇಶನದ ವಿ ಟೀಚ್ ಲೈಫ್..ಸರ್!! ನಾಟಕ ಪ್ರದರ್ಶನಗೊಳ್ಳಲಿದೆ. ಈ ರಂಗೋತ್ಸವದಲ್ಲಿ ಜಗತ್ತಿನ 90 ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ಈ ಹಿಂದೆ 14ನೆ ಭಾರತ್ ರಂಗ್ ಮಹೋತ್ಸವದಲ್ಲಿ ಸಂಗಮ ಕಲಾವೆದರ್ ತಂಡ ಶ್ರೀಪಾದ್ ಭಟ್ ನಿರ್ದೇಶನದ ಕರ್ಣಭಾರ ನಾಟಕ ಪ್ರದರ್ಶಿಸಿತ್ತು. ಅಲ್ಲದೇ ಎಂ.ಗಣೇಶ್ ನಿರ್ದೇಶನದ ವಾಲಿ ವಧೆ ನಾಟಕ 8ನೆ ವರ್ಲ್ಡ್ ಥಿಯೇಟರ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಾಟಕ ನಿರ್ದೇಶಕ ಪ್ರಶಾಂತ್ ಉದ್ಯಾವರ, ಕಲಾವಿದ ರಾದ ಸಂದೀಪ್ ಎಲ್.ಶೆಟ್ಟಿಗಾರ್, ಆನಂದ ಮಣಿಪಾಲ ಉಪಸ್ಥಿತರಿದ್ದರು.